Monday, May 31, 2010

ಇಂಡಿಯಾಸ್ ಲಾಸ್ಟ್ ಟೀ ಶಾಪ್ !!!

ಭಾರತದ ಉತ್ತರಖಾಂಡ ರಾಜ್ಯ ಹಾಗೂ ಚೀನಾದೇಶದ ಗಡಿಯಲ್ಲಿರುವ ಚಾ ಅಂಗಡಿ. ಅಲ್ಲಿಂದ ಮುಂದೆ ಸುಮಾರು 48 ಕಿಲೋಮೀಟರ್ ದೂರದಲ್ಲಿ ಗಡಿಯಿದೆ. ಈ 48 ಕಿಲೋ ಮೀಟರ್ ಹಾಗೂ ಚೀನಾ ಭೂಭಾಗದಲ್ಲಿರುವ 12 ಕಿಲೋಮೀಟರ್ ಜಾಗ ನಿರ್ಜನ ಪ್ರದೇಶ (noman land)
ಅಂಗಡಿಯ ಮುಂದಿರುವ ಬಹುಭಾಷಾ ಫಲಕ (ಕನ್ನಡದ ಫಲಕ ತಪ್ಪಾಗಿ ಬರೆದಿದೆ. ಅದನ್ನು ಅಂಗಡಿಯವ ವಿನಮ್ರನಾಗಿ ಒಪ್ಪಿಕೊಂಡು, ಮುಂದೆ ಸರಿಯಾಗಿ ಸ್ಟಿಕರ್ ಬೋರ್ಡ್ ಮಾಡಿಸುತ್ತೇನೆ ಎಂದು ಭರವಸೆ ನೀಡಿ, ಡೈರಿಯಲ್ಲಿ ಸರಿಯಾದ ವಾಕ್ಯವನ್ನು ಬರೆಸಿಕೊಂಡಿದ್ದಾನೆ.)



ಟೀ ಕುಡಿಯುತ್ತಾ ನಿಂತಾಗ ಅಂಗಡಿಯ ಮುಂದಿನ ದೃಶ್ಯಾವಳಿ ಕಂಡಿದ್ದು ಹೀಗೆ


11 comments:

PARAANJAPE K.N. said...

ಚಿತ್ರ-ಬರಹ-ಮಾಹಿತಿ ಚೆನ್ನಾಗಿದೆ. ಯಾವಾಗ ಹೋಗಿದ್ರಿ ?? ಗೊತ್ತೇ ಆಗ್ಲಿಲ್ಲ?

PARAANJAPE K.N. said...
This comment has been removed by the author.
ಮನದಾಳದಿಂದ............ said...

ಭಾರತದ ಕೊನೆಯ ಚಹಾ ಅಂಗಡಿಯ ಮಾಹಿತಿ ಖುಷಿ ಕೊಟ್ಟಿತು. ಸುಂದರ ಚಿತ್ರಗಳು ಮನಮೋಹಕವಾಗಿವೆ.

Guruprasad said...

ಚಿತ್ರ ಬರಹ ಚೆನ್ನಾಗಿ ಇದೆ, ಇನ್ನಷ್ಟು ಮಾಹಿತಿಗಳು... ವಿವರಣೆಗಳು ಇದ್ದಿದ್ದರೆ, ಚೆನ್ನಾಗಿ ಇತ್ತು....ಮುಂದಿನ ಕಂತಿನಲ್ಲಿ,,, ಹಾಕಿ...

ಸಾಗರದಾಚೆಯ ಇಂಚರ said...

ತುಂಬಾ ಚೆನ್ನಾಗಿದೆ ಸ್ಥಳ
ಒಮ್ಮೆ ಹೋಗ್ಬೇಕು

ವನಿತಾ / Vanitha said...

ಚೆಂದದ ಚಿತ್ರ ಬರಹ ಸರ್:))

shivu.k said...

ಸರ್,

ಫೋಟೊಗಳು ತುಂಬಾ ಚೆನ್ನಾಗಿವೆ. ನಿಮ್ಮ ಪ್ರವಾಸದ ವಿಚಾರವನ್ನು ಇಂಚಿಂಚು ಸೊಗಸಾಗಿ ಬರೆಯುವುದು ಯಾವಾಗ?

ದೀಪಸ್ಮಿತಾ said...

ಚಿತ್ರ ಬರಹ ಚೆನ್ನಾಗಿದೆ. ಸುಧಾದಲೂ ಇದರ ಬಗ್ಗೆ ಬಂದಿತ್ತು. ಅಷ್ಟು ದೂರದಲ್ಲಿ ಕನ್ನಡದ ಬರಹ ಓದಿ ತುಂಬಾ ಸಂತೋಷವಾಯಿತು. ಭಾಷಾಪ್ರಯೋಗ ತಪ್ಪಿರಬಹುದು, ಆದರೆ ಬರೆದಿದ್ದಾನಲ್ಲ, ಅದೇ ಸಂತೋಷ. ಇಲ್ಲೇ ಕರ್ನಾಟಕದಲ್ಲಿ ವರ್ಷಗಟ್ಟಲೆ ಇದ್ದರೂ ಕನ್ನಡ ಬರದವರು ಇರುವಾಗ, ತನಗೆ ಬರದಿದ್ದರೂ ಬರುವ ಪ್ರವಾಸಿಗರಿಗಾಗಿ ಬರೆಸಿದ್ದಾನಲ್ಲ, ಮೆಚ್ಚಬೇಕು.

Unknown said...

ಆತ್ಮೀಯ ಗೆಳೆಯರೆ,
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು. ಮೇ 16ರಿಂದ 29 ರವರೆಗೆ ದೆಹಲಿ-ಹರಿದ್ವಾರ್-ರಿಷಿಕೇಶ್-ಯಮುನೋತ್ರಿ-ಗಂಗೋತ್ರಿ-ಕೇದಾರ್-ಬದರಿ-ಹರಿದ್ವಾರ್-ಜೈಪುರ್-ಆಗ್ರಾ-ದೆಹಲಿ ಯಾತ್ರೆ ಮಾಡಿ ಬಂದೆ!!! ಕನಿಷ್ಠ ೇಳೆಂಟು ಡಿಗ್ರಿಯಿಂದ ಗರಿಷ್ಠ 50 ದಿಗ್ರಿ ಉಷ್ಣಾಂಶದವರೆಗಿನ ತಣ್ಣನೆಯ ಬೆಚ್ಚನೆಯ ಬಿಸಿಯ ಅನುಭವದ ಪ್ರವಾಸ ಇದು.
'ನಾಸ್ತಿಕನೊಬ್ಬನ ಚಾರ್ ಧಾಮ್ ಯಾತ್ರೆ'ಯ ಬಗ್ಗೆ ಬರೆಯಲು ನಾನು ಉತ್ಸುಕನಾಗಿದ್ದೇನೆ. ಆದರೆ ಒಂದೆದೆರಡು ಪ್ರಾಜೆಕ್ಟುಗಳ ಕೆಲಸ, ಕಾಲೇಜು ಕೆಲಸ, ವಾರಾಂತ್ಯದ ತೋಟದ ಕೆಲಸ ಜೊತೆಗೆ ನಮ್ಮ ಕುಟುಂಬದಲ್ಲಿ ಆಗಸ್ಟಿನಲ್ಲಿ ನಡೆಯಬೇಕಾಗಿರುವ ಮದುವೆಯ ಕೆಲಸ ಇವುಗಳ ನಡುವೆ ಅದು ಹೇಗೆ ಸಾಧ್ಯವಾಗುತ್ತದೆಯೋ ನೋಡಬೇಕಾಗಿದೆ. ಹೊರಗಿನ ಪ್ರೋತ್ಸಾಹ ಒಳಗಿನ ಒತ್ತಡ ಅದನ್ನು ಸಾಧ್ಯವಾಗಿಸುತ್ತದೆಯೇ ಏನೋ ಕಾದು ನೋಡಬೇಕಾಗಿದೆ. ಈ ಟೀ ಶಾಪ್ ಅನುಭವವನ್ನು ಮುಂದೆ ವಿವರವಾಗಿ ಖಂಡಿತಾ ಬರೆಯುತ್ತೇನೆ.

Raghu said...

humm..super place.
Raaghu

Unknown said...

Wah!!!.. Nice place..