Friday, December 12, 2014

ನೊಬೆಲ್ಲಿಗೂ ಪುಳಕಗೊಳ್ಳದ ಮನಸ್ಸುಗಳು!


5 comments:

Manohamsa said...
This comment has been removed by the author.
Manohamsa said...

'ನೋಬೆಲ್ಲಿಗೂ ಪುಳಕಗೊಳ್ಳದ' ಎಂಬ ಮಾತು ನೀವು ಆ ಪ್ರಶಸ್ತಿಗೆ ಕೊಡುವ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ಸಂತೋಷ. ಆದರೆ ಸಮಸ್ತ ಭಾರತೀಯರೂ ಆ ಪ್ರಶಸ್ತಿಗೆ ನಿಮ್ಮಷ್ಟೇ ಪ್ರಾಮುಖ್ಯತೆ ಕೊಡಬೇಕೆಂದು ಏಕೆ ಬಯಸುತ್ತೀರಿ? ಪ್ರಾಶ್ಚಾತ್ಯರು ಕೊಡುವ ಅನೇಕ ಪ್ರಶಸ್ತಿಗಳ ಬಗ್ಗೆ ಭಾರತೀಯರಿಗೆ ಉದಾಸೀನ ಮೂಡಲು ಕಾರಣಗಳು ಇಲ್ಲದಿಲ್ಲ. ಆ ಬಹುತೇಕ ಪ್ರಶಸ್ತಿಗಳು ಪಶ್ಚಿಮದ ಮೇಲ್ಮೆಯನ್ನು ಪೂರ್ವದ ಕೀಳ್ಮೆಯನ್ನು ಎತ್ತಿ ತೋರಿಸಿ ತಮ್ಮ ಅಹಮ್ಮಿನ ತೃಪ್ತಿಪಡಿಸಿಕೊಳ್ಳುವಿಕೆಗೆ ಸೀಮಿತವಾಗಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಭಾರತೀಯರ ಎದೆಯುಬ್ಬುವಂತೆ ಮಾಡುವ 'ಲಗಾನ್' ಆಸ್ಕರ್ನಿಂದ ತಿರಸ್ಕೃತಗೊಳ್ಳುತ್ತದೆ; ಅದೇ ಸ್ಲಂ ಡಾಗ್ ಮಿಲೇನಿಯರ್ ಅನ್ನು ತಲೆಯ ಮೇಲೆ ಹೊತ್ತು ಪುರಸ್ಕರಿಸುತ್ತಾರೆ. 'ವೈಟ್ ಟೈಗರ್', 'ಗಾಡ್ ಆಫ್ ಸ್ಮಾಲ್ ತಿಂಗ್ಸ್' ನಂತಹ ಭಾರತದ ಕುಂದು ಕೊರತೆಗಳನ್ನೇ ಎತ್ತಿ ತೋರಿಸುವ ಪುಸ್ತಕಗಳಿಗೇ ಬೂಕರ್ ನಂತಹ ಪ್ರಶಸ್ತಿಗಳು. ಮದರ್ ತೆರೇಸಾಗಿಂತ ೧೦೦೦ ಪಟ್ಟು ಹೆಚ್ಚು ಬಡ ಮಕ್ಕಳ ಸೇವೆ ಮಾಡಿರುವ ಸಿಧ್ಧಗಂಗಾ ಶ್ರೀಗಳಿಗೆ ನೊಬೆಲ್ ದೊರೆಯುವುದಿಲ್ಲ. ಏಕೆ? ಅವರು ಪಶ್ಚಿಮದಿಂದ ಬಂದು ನಮ್ಮನ್ನು ಉದ್ಧರಿಸಲಿಲ್ಲವೆಂದೇ?
ದಶಕಗಳ ನಂತರ ರಾಷ್ಟ್ರೀಯತೆಯ ಮನೋಭಾವ ಜಾಗೃತವಾಗಿ ಭಾರತೀಯರು ಒಂದು ಸ್ವಂತ ಬಲದ ಸರ್ಕಾರಕ್ಕೆ ಅಧಿಕಾರ ಕೊಟ್ಟು ತಮ್ಮ ಅಸ್ಮಿತತೆಯ ಬಗ್ಗೆ ಹೆಮ್ಮೆ ಪಡುತ್ತಿರುವಾಗಲೇ, ಮುಕ್ಕಾಲು ಪಾಲು ಏನ್ ಜಿ ಓ ಗಳು ಯಾರ ಉದ್ದೇಶಗಳ ಸಲುವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂಬುದು ಬಯಲಾಗುತ್ತಿರುವಾಗಲೇ ಈ ಪ್ರಶಸ್ತಿಯ ಘೋಷಣೆಯಾಗಿರುವುದು ಜನರಲ್ಲಿ ಸಂಶಯ ಮೂಡಿಸಿದೆ. ಚೈನಾ ದೇಶದಲ್ಲಿ ಮಾನವ ಹಕ್ಕುಗಳು ಇಲ್ಲವೇ ಇಲ್ಲವೆನುವಷ್ಟು ಕಡಿಮೆಯಿದೆ. ಅಲ್ಲಿಯ ಯಾವುದಾದರೂ ಹೋರಾಟಗಾರರಿಗೆ ನೊಬೆಲ್ ನೀಡಿ ಆ ಬಲಿಷ್ಠ ದೇಶದ ಕಣ್ಣು ಕೆಂಪಗಾಗುವಂತೆ ಮಾಡುವ ಧೈರ್ಯ ಪಶ್ಚಿಮಕ್ಕಿದೆಯೇ? ಅಷ್ಟಕ್ಕೂ ಮಕ್ಕಳ ಹಕ್ಕಿನ ಸಮಸ್ಯೆ ನಮ್ಮಲ್ಲಿ ಮಾತ್ರ ಇರುವುದಲ್ಲವಲ್ಲ? ಮಾದಕ ವ್ಯಸನದಿಂದ ದುರ್ಬಲವಾಗಿ ನಾಶವಾಗುತ್ತಿರುವ ಪಶ್ಚಿಮದ ಮಕ್ಕಳ ಶ್ರೇಯೋಭಿವೃಧ್ದಿಗಾಗಿ ಶ್ರಮಿಸುತ್ತಿರುವ ಅನೇಕ ವ್ಯಕ್ತಿ/ಸಂಸ್ಥೆಗಳು ಅಲ್ಲಿಯೂ ಇವೆಯಷ್ಟೇ?

Unknown said...

ನಟಿಯ ಉಳುಕಿದ ಸೊಂಟ, ಬದಲಾದ ಕ್ರಿಕೆಟ್ಟಿಗನ ಕೇಶವಿನ್ಯಾಸ ಇವುಗಳನ್ನು ಯುವಸಮುದಾಯದ ಮುಂದೆ ಮಾದರಿಯನ್ನಾಗಿ ಇಡುವುದಕ್ಕಿಂತ ನೊಬೆಲ್ ಪುರಸ್ಕೃತರನ್ನು ಮಾದರಿಯ್ನನಾಗಿ ಇಡುವುದು ಸಮಂಜಸವಲ್ಲವೆ?
ಇದೇ ಪ್ರಶಸ್ತಿ ನಮ್ಮ ಮೋದಿಯವರಿಗೊ, ಸಚ್ಚಿನ್ನಿಗೊ ಸಿಕ್ಕಿದ್ದರೆ ಜನರ ಪ್ರತಿಕ್ರಿಯೆ ಹೀಗೇ ಇರುತ್ತಿತ್ತೇ?
ಇರಲಿ ಬಿಡಿ. ನನ್ನ ಉದ್ದೇಶವನ್ನು ಗಮನಿಸದೆ ಕೇವಲ ನಿಮಗೆ ಎನ್.ಜಿ.ಒ.ಗಳ ಮೇಲೆ, ಪಾಶ್ಚಾತ್ಯರ ಮೇಲೆ ಇರುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರಿ. ಅಭಿನಂದನೆಗಳು

Manohamsa said...

>>"ನಟಿಯ ಉಳುಕಿದ ಸೊಂಟ, ಬದಲಾದ ಕ್ರಿಕೆಟ್ಟಿಗನ ಕೇಶವಿನ್ಯಾಸ ಇವುಗಳನ್ನು ಯುವಸಮುದಾಯದ ಮುಂದೆ ಮಾದರಿಯನ್ನಾಗಿ ಇಡುವುದಕ್ಕಿಂತ ನೊಬೆಲ್ ಪುರಸ್ಕೃತರನ್ನು ಮಾದರಿಯ್ನನಾಗಿ ಇಡುವುದು ಸಮಂಜಸವಲ್ಲವೆ?"
ನಾವು ಯಾರನ್ನು ಮಾದರಿಯನ್ನಾಗಿಟ್ಟುಕೊಳ್ಳಬೇಕು ಎಂಬುದಕ್ಕೆ ವಿದೇಶಿಗರು ಕೊಡುವ ಪ್ರಶಸ್ತಿಗಳೇ ಮಾನದಂಡವಾದರೆ ನಮ್ಮ ಮುಂದಿನ ಪೀಳಿಗೆಯ ಆದರ್ಶವನ್ನು ನಿರ್ಧರಿಸುವ ಕೀಲಿಕೈಯನ್ನು ನಾವೇ ಅವರಿಗೆ ನೀಡಿದಂತೆ.
ಮಾಧ್ಯಮಗಳ TRP ಮಾನದಂಡ, ಲಾಭಕೋರತನ ಇವೆಲ್ಲಾ ಗೊತ್ತಿರುವಂತದ್ದೇ. ನನ್ನ ಅಭಿಪ್ರಾಯಗಳು ಮಾಧ್ಯಮದ ಕುರಿತಾದದ್ದಲ್ಲ. ತಮ್ಮ ಲೇಖನದಲ್ಲಿ ಮಾಧ್ಯಮದ ಉಲ್ಲೇಖ ಮೂರನೆಯದಾಗಿ ಬರುತ್ತದೆ. ನನ್ನ ಅಭಿಪ್ರಾಯ ಇದ್ದದ್ದು ತಮ್ಮ ಮೊದಲೆರಡು ಅಕ್ಷೇಪಗಳ ಕುರಿತು:
೧. "ಭಾರತೀಯ ಮನಸ್ಸುಗಳು ಇದಕ್ಕೆ ಸ್ಪಂದಿಸದಿದ್ದುದು ಮಾತ್ರ ಅತ್ಯಂತ ನಿರಾಶಾದಾಯಕ"
೨. "ಪ್ರಜೆಗಳು, ಪ್ರಜಾಪ್ರತಿನಿಧಿಗಳು ಇದರಿಂದ ಪುಳಕಿತರಾಗಿ ಸಂಭ್ರಮಿಸಲಿಲ್ಲ"

ತಮಗೆ ತಿಳಿದಿರಬಹುದು. ಭಾರತ ಸರ್ಕಾರವೂ ಸಹ ೧೯೯೫ರಿಂದ ಅಂತರ ರಾಷ್ಟ್ರೀಯ ಗಾಂಧೀ ಶಾಂತಿ ಪುರಸ್ಕಾರವನ್ನು ಅನೇಕ ವಿದೇಶೀ ಗಣ್ಯರಿಗೆ ನೀಡಿದೆ. ಆದರೆ ಜಾಗತಿಕ ಮಾಧ್ಯಮಗಳ್ಯಾವುವೂ ಡೈನಮೈಟ್ ಕಂಡುಹಿಡಿದ ವಿಜ್ಞಾನಿಯ ಹೆಸರಿನಲ್ಲಿ ಕೊಡುವ (ಗಾಂಧೀಜಿಗೇ ಸಿಗದ)ನೊಬೆಲ್ ಶಾಂತಿ ಪುರಸ್ಕಾರಕ್ಕೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಸ್ವತಃ ಶಾಂತಿದೂತ ಗಾಂಧೀಜಿಯ ಹೆಸರಿನ ಪುರಸ್ಕಾರಕ್ಕೆ ನೀಡುವುದಿಲ್ಲ. ಜಾಗತಿಕ ಪ್ರಜೆಗಳೂ, ಪ್ರಜಾಪ್ರತಿನಿಧಿಗಳೂ ಸಹ ಇದಕ್ಕೆ ಹೊರತಲ್ಲ.
(ಪ್ರಶಸ್ತಿಯ ತೂಕಕ್ಕೆ ಅದರ ಜೊತೆಗಿನ ಬಹುಮಾನ ಧನವೇ ಮಾನದದಂಡವಿರಬಹುದೋ?)

>>"ಇರಲಿ ಬಿಡಿ. ನನ್ನ ಉದ್ದೇಶವನ್ನು ಗಮನಿಸದೆ ಕೇವಲ ನಿಮಗೆ ಎನ್.ಜಿ.ಒ.ಗಳ ಮೇಲೆ, ಪಾಶ್ಚಾತ್ಯರ ಮೇಲೆ ಇರುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರಿ. ಅಭಿನಂದನೆಗಳು"
ನಿಮ್ಮ ಲೇಖನದಲ್ಲಿ ಸಾರಾಸಗಟಾಗಿ "ಭಾರತೀಯರ ದಾರಿದ್ರ್ಯ ಸಂಸ್ಕೃತಿಯಲ್ಲಿದೆ" ಎನ್ನುವುದರ ಮೂಲಕ ನಿಮಗೆ ಭಾರತೀಯರ ಮೇಲೆ ಇರುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೀರಿ ಎಂದು ಓದುಗರೂ ಅರ್ಥೈಸಿಕೊಳ್ಳಬಹುದಲ್ಲವೇ?

Manohamsa said...

ಕೊನೆಯದಾಗಿ, ವಿಷಯವನ್ನು ಕೊಂಚ ತಿಳಿಗೊಳಿಸುವುದಕ್ಕೆಂದು:
ಇತ್ತೀಚಿಗೆ ಈ ಪ್ರಶಸ್ತಿ ಪುರಸ್ಕಾರಗಳಲ್ಲೆಲ್ಲ ರಾಜಕೀಯದ ಪ್ರವೇಶವಾಗಿ ಅವು ಬೆಲೆ ಕಳೆದುಕೊಂಡಿವೆಯಾದರೂ, ಪ್ರಶಸ್ತಿ ಲಭಿಸಿರಲಿ ಇಲ್ಲದಿರಲಿ, ಸಾಧಕರ ಬಗ್ಗೆ ಜನಮಾನಸದಲ್ಲಿ ಇರುವ ಗೌರವವಂತೂ ಸ್ಥಾಯಿಯಾಗಿ ಇದ್ದೇ ಇದೆ. ದಲೈ ಲಾಮಾ, ಮಂಡೇಲಾರಂತವರನ್ನು ಅಲಂಕರಿಸಿ ಬೆಲೆ ಹೆಚ್ಚಿಸಿಕೊಂಡಿದ್ದ ನೊಬೆಲ್ ಶಾಂತಿ ಪ್ರಶಸ್ತಿ, ಪ್ರಭಾವಕ್ಕೊಳಗಾಗಿ ಯುದ್ಧಕೋರ ದೊಡ್ದಣ್ಣನಿಗೂ ಲಭಿಸಿದ ಮೇಲೆ ಅದರ ಮೌಲ್ಯ ಭಾರತದಲ್ಲಷ್ಟೇ ಅಲ್ಲದೆ ಜಾಗತಿಕವಾಗಿಯೂ ಕುಗ್ಗಿದೆ. ಇಂತಹ ಪ್ರಶಸ್ತಿಯೊಂದರ ಬಗೆಗಿನ ಜನರ ಸಕಾರಣವೋ ನಿಷ್ಕಾರಣವೋ ಆದ ಉದಾಸೀನವನ್ನು ನಮ್ಮ ಸಂಸ್ಕೃತಿಗೇ ಒದಗಿದ ದಾರಿದ್ರ್ಯವೆಂದು ಉಲ್ಲೇಖಿಸಿ ನಾವೇಕೆ ಸುಮ್ಮನೇ ಆತ್ಮಘ್ಲಾನಿ ಮಾಡಿಕೊಳ್ಳಬೇಕು ಅಲ್ಲವೇ?:-) ಏಕೆಂದರೆ ಇಂದು ಭಾರತೀಯರ ದಾರಿದ್ರ್ಯವಿರುವುದು ಆತ್ಮಗೌರವದಲ್ಲೇ ಹೊರತು, ಸಂಪತ್ತಿನಲ್ಲೂ ಅಲ್ಲ, ಸಂಸ್ಕೃತಿಯಲ್ಲಂತೂ ಅಲ್ಲವೇ ಅಲ್ಲ!