Wednesday, December 17, 2014

ಎಲ್ಲ ಮೂಲಭೂತವಾದಿಗಳಿಗೊಂದು ಪಾಠ


4 comments:

Narendra Kumar said...

ಸ್ವಾಮಿ,

ನೀವು ಇಸ್ಲಾಂ ಅನ್ನು ಅರ್ಥ ಮಾಡಿಕೊಂಡರೆ, ಕುರಾನ್ ಓದಿ ತಿಳಿದರೆ, ಈ ಮತೀಯ ಮೂಲಭೂತವಾದದ ಬೇರುಗಳು ಎಲ್ಲಿವೆ, ಇದರ ಆಳ-ಅಗಲ ಎಷ್ಟು ಎನ್ನುವುದು ತಿಳಿಯುತ್ತದೆ.
'ತಾಲಿಬಾನ್', 'ಮುಜಾಹಿದ್ದೀನ್', 'ಅಲ್ ಖೈದಾ', 'ಇಸ್ಲಾಮಿಕ್ ಸ್ಟೇಟ್', ಇತ್ಯಾದಿ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಭಯಂಕರ ರಾಕ್ಷಸನನ್ನು "ಎಲ್ಲಾ ಮೂಲಭೂತವಾದಿಗಳಿಗೆ ಪಾಠ" ಎನ್ನುವ ಮೂಲಕ ತಿಪ್ಪೆ ಸಾರಿಸಿಬಿಟ್ಟರೆ ಮುಗಿದು ಹೋಯಿತು ಎಂದು ತಿಳಿಯಬೇಡಿ.
ಇಸ್ಲಾಂ ಮತೀಯ ಮೂಲಭೂತವಾದ ಎನ್ನುವುದು ಜಗತ್ತನ್ನೇ ಮೂರನೇ ಮಹಾಯುದ್ಧದ ದ್ವಾರಕ್ಕೆ ತಂದು ನಿಲ್ಲಿಸಿದೆ.
ಅದನ್ನು ಕುರಿತು ಮಾತನಾಡುವಾಗ, ಎಲ್ಲಿಯೂ ಇಲ್ಲದ ಹಿಂದು ಮೂಲಭೂತವಾದವನ್ನು ನೀವು ಹಿಡಿದು ತಂದಿರುವುದು ಸೋಜಿಗವನ್ನುಂಟು ಮಾಡುತ್ತದೆ. ಭಾರತದಲ್ಲಿ ಕೆಲವು ಹಿಂದು ಗುಂಪುಗಳು ಉಗ್ರವಾದಿಗಳ ರೂಪದಲ್ಲಿ ಕಾರ್ಯಾಚರಣೆಗೆ ಪ್ರಯತ್ನಿಸಿರಬಹುದು. ಆದರೆ, ಅದೆಲ್ಲವೂ ಕೇವಲ "ಓಟು ಬ್ಯಾಂಕ್ ರಾಜಕಾರಣ" ಮತ್ತು "ಹಿಂದುಗಳನ್ನು ದ್ವಿತೀಯ ದರ್ಜೆ ಪ್ರಜೆಯಾಗಿಸುವ ಹುನ್ನಾರ"ಕ್ಕೆ ಪ್ರತಿಕ್ರಿಯೆ ಅಷ್ಟೇ. ಅದು ಸರಿ ಎಂದು ನಾನು ಹೇಳುತ್ತಿಲ್ಲ. ಆದರೆ, ಅದನ್ನು ಇಸ್ಲಾಮೀ ಮತೀಯ ಮೂಲಭೂತವಾದಕ್ಕೆ ಹೋಲಿಸುವುದು ಬಾಲಿಶವಾದೀತು. ಹಿಂದು ಗುಂಪುಗಳು ಭಾರತದ ಕೆಲವೇ ಪ್ರದೇಶಕ್ಕೆ ಸೀಮಿತ. ಮತ್ತು ಅವುಗಳು ಇಂದಿನವರೆಗೂ ಯಾವುದೇ ಉಗ್ರಗಾಮಿ/ಭಯೋತ್ಪಾದಕ ಚಟುವಟಿಕೆಯಲ್ಲಿ ಪಾಲ್ಗೊಂಡದ್ದು ನಿರೂಪಣೆಯಾಗಿಲ್ಲ (ಕೇವಲ ಆರೋಪಗಳಿವೆ ಮತ್ತು ದಶಕವೇ ಕಳೆದರೂ NIA ಸಂಸ್ಥೆಯು ಹಿಂದು ಗುಂಪುಗಳ ಪಾತ್ರವನ್ನು ನಿರೂಪಿಸಲಾಗಿಲ್ಲ ಎನ್ನುವುದು ಸ್ಪಷ್ಟ). ಅದೇ ಇಸ್ಲಾಮೀ ಮತೀಯ ಮೂಲಭೂತವಾದವನ್ನು ನೋಡಿ - ಅದು ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆ ಹರಡುತ್ತಿದೆ. ಭಾರತದಲ್ಲೂ ಒಂದು ಸಾವಿರ ವರ್ಷ ಹಿಂದುಗಳನ್ನು ಮತಾಂತರಿಸಲು ಎಗ್ಗಿಲ್ಲದ ಭಯೋತ್ಪಾದನೆ ನಡೆದಿದೆ. ಆದರೆ, "ಸೆಕ್ಯುಲರಿಸಂ" ಹೆಸರಿನಲ್ಲಿ ಇದಾವುದನ್ನೂ ನೆನಪಿಸಿಕೊಳ್ಳಬಾರದು ಎಂದು ಹಿಂದುಗಳಿಗೆ ಕಲಿಸಲಾಗುತ್ತಿದೆ. ಆದರೆ, ಸತ್ಯವನ್ನು ಎಂದೂ ಮುಚ್ಚಿಡಲಾಗುವುದಿಲ್ಲ. ಮತ್ತು ಸುಳ್ಳಿನ ಆಧಾರದ ಮೇಲೆ ದೇಶವನ್ನು/ಸಮಾಜವನ್ನು ಕಟ್ಟಲಾಗದು. ಮುಸಲ್ಮಾನರು ಬೇಸರಿಸಿಕೊಳ್ಳುತ್ತಾರೆ ಎಂದು ಸತ್ಯವನ್ನು ಮುಚ್ಚಿಡುವುದು ಮುಸಲ್ಮಾನರಿಗೆ ಮಾಡುವ ಮೋಸ ಎನ್ನುವುದೂ ತಿಳಿಯಬೇಕು. ಹೀಗೆ ಮಾಡುವುದರ ಮೂಲಕ ಎಲ್ಲ ಮುಸಲ್ಮಾನರನ್ನೂ ಆಕ್ರಮಣಕಾರಿಗಳ ಜೊತೆ ಸೇರಿಸಲಾಗುತ್ತದೆ ಎನ್ನುವ ಮೂಲಭೂತ ತಿಳುವಳಿಕೆ ಇದ್ದಿದ್ದರೆ, ಈ ಪ್ರಯತ್ನ ಆಗುತ್ತಿರಲಿಲ್ಲ ಎನಿಸುತ್ತದೆ.
ಈಗಲೂ ಸಹ ನೀವು ಮಾಡಿರುವುದು ಅದನ್ನೇ. ಪಾಕಿಸ್ತಾನದಲ್ಲಿ ಆಗಿರುವ ಅನಾಹುತವನ್ನು ಖಂಡಿಸುವ ಬದಲು, "ಎಲ್ಲಾ ರೀತಿಯ ಮೂಲಭೂತವಾದ" ಎನ್ನುವ ವಾದವನ್ನು ತಂದು, ಅದಕ್ಕೆ ಹಿಂದುಗಳನ್ನೂ ಕಟ್ಟಿಹಾಕಿ, ಮುಸಲ್ಮಾನರಿಗೆ ಬೇಸರವಾಗದಂತೆ ಸಿಹಿ ಲೇಪನದ ಮಾತನಾಡಿರುವಿರಿ. ಇದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಸತ್ಯವೆನ್ನುವುದು ಕಹಿಯೇ ಇರಬಹುದು. ಆದರೆ, ಅದನ್ನು ತಿಳಿಸುವುದೇ ಸಮಸ್ಯೆಗೆ ಪರಿಹಾರ.

Unknown said...

ಮಾನ್ಯರೆ,
ಧನ್ಯವಾದಗಳು.
ಹೀಗ್ಗೆ ಅರವತ್ತು ವರ್ಷಗಳ ಹಿಂದೆ ಪಾಕಿಸ್ತಾನದಲ್ಲಿ ಮೂಲಭೂತವೆಂಬುದು, ಇಂದು ಭಾರತದಲ್ಲಿರುವಂತೆ ಕ್ಷೀಣವಾಗಿಯೇ (ನೀವೇ ಹೇಳಿದಂತೆ - ಭಾರತದಲ್ಲಿ ಕೆಲವು ಹಿಂದು ಗುಂಪುಗಳು ಉಗ್ರವಾದಿಗಳ ರೂಪದಲ್ಲಿ ಕಾರ್ಯಾಚರಣೆಗೆ ಪ್ರಯತ್ನಿಸಿರಬಹುದು.) ಇತ್ತು. ಆದರೆ, ಅದನ್ನು ಅಲ್ಲಿಯ ರಾಜಕಾರಣಿಗಳು, ಸೇನೆ ಬೆಂಬಲಿಸಿದ್ದರ ಪರಿಣಾಮವನ್ನು ಇಂದು ಅದು ಉಣ್ಣುತ್ತಿದೆ. ಈ ಎಚ್ಚರ ಜಗತ್ತಿಗಿದ್ದರೆ ಒಳ್ಳೆಯದು. ಇತಿಹಾಸದಿಂದ ನಾವು ಪಾಠ ಕಲಿಯದಿದ್ದರೆ, ನಮ್ಮ ನಾಶಕ್ಕೆ ನಾವೇ ಗುದ್ದಲಿ ಪೂಜೆ ಮಾಡಿಕೊಂಡತೆ. ಇದಕ್ಕಿಂತ ಹೆಚ್ಚಿಗೆ ಇನ್ನೇನು ಹೇಳಲಾರೆ

Narendra Kumar said...

[[ಅರವತ್ತು ವರ್ಷಗಳ ಹಿಂದೆ ಪಾಕಿಸ್ತಾನದಲ್ಲಿ ಮೂಲಭೂತವೆಂಬುದು, ಇಂದು ಭಾರತದಲ್ಲಿರುವಂತೆ ಕ್ಷೀಣವಾಗಿಯೇ ಇತ್ತು.]]

ನಿಮ್ಮ ಈ ಮಾತುಗಳೇ ಇತಿಹಾಸದ ಕುರಿತಾಗಿ ನಿಮಗಿರುವ ಅಜ್ಞಾನಕ್ಕೆ ಸಾಕ್ಷಿ.
ಪಾಕಿಸ್ತಾನವು ಹುಟ್ಟಿದ್ದೇ ಭಯೋತ್ಪಾದನೆ/ಮೂಲಭೂತವಾದದಿಂದು ಎನ್ನುವುದು ನೆನಪಿರಲಿ. 1942ರ Direct Action ಮತ್ತು 1947ರ ವಿಭಜನೆಯ ಸಂದರ್ಭದಲ್ಲಿ ಲಕ್ಷಾಂತರ ಜನ ಆಹುತಿಯಾಗಲೂ ಇದೇ ಇಸ್ಲಾಮಿ ಮೂಲಭೂತವಾದ ಕಾರಣ. 1990ರ ದಶಕದಲ್ಲಿ ಕಾಶ್ಮೀರದಲ್ಲಿ ಲಕ್ಷಾಂತರ ಜನ ಹಿಂದುಗಳು ವಲಸೆ ಹೋಗಲು ಸಹ ಇದೇ ಇಸ್ಲಾಮೀ ಮತೀಯ ಮೂಲಭೂತವಾದ ಕಾರಣ.

ಮತ್ತು ಇಸ್ಲಾಮೀ ಮತೀಯ ಮೂಲಭೂತವಾದವನ್ನು ಕೇವಲ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಯಾವುದೋ ಸಣ್ಣ ಘಟನೆ ಎಂದು ನೀವು ತಿಳಿದಿರುವಂತಿದೆ. ಇದು ಜಾಗತಿಕ ಭಯೋತ್ಪಾದನೆಯ "Pan Islamism"ನ ಒಂದು ಮುಖ ಅಷ್ಟೇ. ಈ ಜಾಗತಿಕ ಭಯೋತ್ಪಾದನೆಯಿಂದ ಪಾಕಿಸ್ತಾನದ ಘಟನೆಯನ್ನು, ಭಾರತದಲ್ಲಿ ಇಲ್ಲಿಯವರೆಗೆ ನಡೆದಿರುವ ಅಸಂಖ್ಯಾತ ಭಯೋತ್ಪಾದನಾ ಘಟನೆಗಳನ್ನು ಪ್ರತ್ಯೇಕಿಸಿ ನೋಡುವಂತಿಲ್ಲ.
ಇಂದು IS ನಂತಹ ಭಯಂಕರ ಸಂಸ್ಥೆಗೆ ಭಾರತದ ಯುವಕರು ಬೆಂಬಲಿಸುತ್ತಿದ್ದಾರೆಂದರೆ, ಈ ಮತೀಯ ಮೂಲಭೂತವಾದದ ಬೇರುಗಳು ಎಷ್ಟು ಆಳಕ್ಕೆ ಇಳಿದಿವೆ ಮತ್ತು ಇದರ ಪರಿಣಾಮ ಭಾರತದ ಮೇಲೆ ಯಾವ ರೀತಿ ಆಗಬಹುದು ಎಂದು ಊಹಿಸಬಹುದು.

ಇಷ್ಟೆಲ್ಲಾ ಭಯಂಕರವಾಗಿ ಬೆಳೆದಿರುವ ಇಸ್ಲಾಮೀ ಮತೀಯ ಮೂಲಭೂತವಾದವನ್ನು ನೇರವಾಗಿ ಖಂಡಿಸುವ ಬದಲು "ಎಲ್ಲಾ ಮೂಲಭೂತವಾದಗಳೂ" ಎಂದು ತಿಪ್ಪೆ ಸಾರಿಸುವ ಅಗತ್ಯ ಏನೆಂದು ನನಗೆ ತಿಳಿಯುತ್ತಿಲ್ಲ.
ರಾಜಕಾರಣಿಗಳಿಗಾದರೆ ಮುಸಲ್ಮಾನರ ಮತಗಳು ಕೈತಪ್ಪಿ ಹೋಗುತ್ತದೆನ್ನುವ ಆತಂಕವಿರುತ್ತದೆ. ಆದರೆ, ನಿಮಗೆ ಆ ರೀತಿಯ ಯಾವ 'ಆತಂಕ'ವಿದೆಯೋ ತಿಳಿಯುತ್ತಿಲ್ಲ.

ಹಿಂದುಗಳ ಕುರಿತಾಗಿ ಒಂದು ವಿಷಯ ಸ್ಪಷ್ಟವಾಗಿ ತಿಳಿದುಕೊಳ್ಳಿ. ಕಳೆದ ಹತ್ತು ಸಾವಿರ ವರ್ಷಗಳ ಭಾರತದ ಇತಿಹಾಸದಲ್ಲಿ ಹಿಂದುಗಳು ಎಂದೂ ಮತೀಯ ಮೂಲಭೂತವಾದ, ಭಯೋತ್ಪಾದನೆ ನಡೆಸಿಲ್ಲ. "ವಸುದೈವ ಕುಟುಂಬಕಂ" ಎನ್ನುವುದು, "ಸರ್ವೇ ಜನಾಃ ಸುಖಿನೋ ಭವಂತು" ಎನ್ನುವುದು ಹಿಂದುಗಳ ರಕ್ತದಲ್ಲಿ ಸೇರಿ ಹೋಗಿದೆ. ಹಿಂದುವು ಎಂದೂ ಮತೀಯನಾಗಲಾರ, ಭಯೋತ್ಪಾದಕನಾಗಲಾರ.

ಆದರೆ, ಹಿಂದುವು ತನ್ನ ಮೇಲೆ ಆದ ಆಕ್ರಮಣಗಳನ್ನೆಲ್ಲಾ ಸಹಿಸಿಕೊಂಡು ತೆಪ್ಪಗೆ, ಹೇಡಿಯಂತೆ ಇರಬೇಕೆಂದು (ಇಲ್ಲಿಯವರೆಗೂ ಇದ್ದಂತೆ) ನೀವು ಬಯಸಿದರೆ, ಅದು ಸಾಧ್ಯವಿಲ್ಲ. ತನ್ನ ಮೇಲೆ ಆಕ್ರಮಣಗಳಾಗದಂತೆ ಬಲಿಷ್ಠ ಸಮಾಜವಾಗಿ ಹಿಂದು ಸಮಾಜ ಬೆಳೆಯುತ್ತಿದೆ. ಮತ್ತು ಯಾರಾದರೂ ಆಕ್ರಮಣ ಮಾಡಲು ಪ್ರಯತ್ನಿಸಿದರೆ ಅದು ಪ್ರತಿಕ್ರಿಯಿಸುತ್ತದೆ, ಆಕ್ರಮಣವನ್ನು ಹತ್ತಿಕ್ಕುತ್ತದೆ. ಆ ರೀತಿಯ ಪ್ರತಿಕ್ರಿಯೆಯೇ ತಪ್ಪೆಂದು ನೀವೆನ್ನಬಹುದು. ಆ ರೀತಿಯ ಪ್ರತಿಕ್ರಿಯೆ ಆಗಬಾರದೆಂದರೆ, ಆಕ್ರಮಣಕಾರಿಗಳಿಗೆ ಆಕ್ರಮಣ ಮಾಡದಂತೆ ಉಪದೇಶ ಮಾಡಬೇಕು ಅಷ್ಟೇ. ಅದು ಸಾಧ್ಯವೇ ಯೋಚಿಸಿ ನೋಡಿ.

Unknown said...

ಇತಿಹಾಸದ ಬಗೆಗಿನ ನಮ್ಮ ಅಜ್ಞಾನವನ್ನು ಪತ್ತೆ ಹಚ್ಚಿದ್ದಕ್ಕೆ ಧನ್ಯವಾದಗಳು ಮಹಾಶಯರೆ