Saturday, February 14, 2015

ಸಂಸ್ಕೃತ: ಅತಿರೇಕಗಳು ಕಡಿಮೆಯಾಗಲಿ


3 comments:

Badarinath Palavalli said...

ಒಳ್ಳೆಯ ಕಿವಿ ಮಾತಿನಂತಹ ಬರಹ.

Narendra Kumar S.S said...

ಭಾಷೆಯ ವಿಕಾಸದಲ್ಲಿ ಮೊದಲು ಮಾತನಾಡಲು ಬಳಸುವುದು ಮತ್ತು ನಂತರ ಅದಕ್ಕೊಂದು ಸೂಕ್ತ ವ್ಯಾಕರಣ, ಲಿಪಿಗಳು ಬರುತ್ತದೆಯಲ್ಲವೇ? ಮಾತನಾಡಲು ಬಳಸದ ಭಾಷೆಗೆ ವ್ಯಾಕರಣ ರಚಿಸುವ ಅಗತ್ಯವೇನಿದೆ? ಅದರಲ್ಲೂ ಸಂಸ್ಕೃತ ವ್ಯಾಕರಣ ಅತ್ಯಂತ ಚತುರ ರೀತಿಯಿಂದ ರಚಿತವಾಗಿರುವುದು. ಅದು ಇಂದಿನ ಗಣಕಯಂತ್ರಗಳಿಗೆ ಹೊಂದಿಸಲು ಬರುವ ಏಕೈಕ ಮಾನವಭಾಷೆ ಎಂದು ವಿಜ್ಞಾನಿಗಳು ನಿರ್ಧರಿಸಿದ್ದಾರೆ (ಉಳಿದೆಲ್ಲಾ ಭಾಷೆಗಳೂ Context sensitive ಆದರೆ, ಸಂಸ್ಕೃತ ಮಾತ್ರ Context free grammar ಹೊಂದಿದೆ).

ಇನ್ನು ನೀವು ಪ್ರಾಕೃತ ಎಂಬ ಭಾಷೆಯ ಹೆಸರು ಬಳಸಿದ್ದೀರಿ. ಅದು ಬೇರೆ ಭಾಷೆಯಲ್ಲ; ಬದಲಾಗಿ ಸಂಸ್ಕೃತದ ಗ್ರಾಮ್ಯ ಸ್ವರೂಪವೇ. ಹರಪ್ಪ-ಮೊಹೆಂಹಾದಾರೋ ಗಳಲ್ಲಿ ದೊರೆತಿರುವ ಬರಹಗಳ ಭಾಷೆ ಸಂಸ್ಕೃತವೇ ಎಂದು ಪುರಾತತ್ತ್ವ ಶಾಸ್ತ್ರಜ್ಞರು ನಿರ್ಧರಿಸಿದ್ದಾರೆ. ಅಂದರೆ, ಸಂಸ್ಕೃತದ ಮತ್ತೊಂದು ರೂಪ ಇದು (ಧಾರವಾಡ ಕನ್ನಡ, ಮಂಗಳೂರು ಕನ್ನಡ, ಇತ್ಯಾದಿಯಂತೆ). ಅದೇ ರೀತಿ ಪೈಶಾಚ, ಪಾಳಿ, ಮುಂತಾದವುಗಳು ಕೂಡಾ ಸಂಸ್ಕೃತದ ವಿವಿಧ ರೂಪಗಳೇ. ಸಂಸ್ಕೃತವು ನಾಗರಿ ಲಿಪಿ ಬಳಸಿದರೆ, ಈ ಭಾಷೆಗಳು ಬೇರೆಯ ಲಿಪಿಗಳನ್ನು ಬಳಸಿದವು.

ಸಂಸ್ಕೃತ ಆಡುಭಾಷೆಯಾಗಿರಲಿಲ್ಲವೇ ಎಂದು ನೀವು ಅನುಮಾನ ವ್ಯಕ್ತಪಡಿಸಿದ್ದೀರಿ. ಸಂಸ್ಕೃತದ ಇಂದಿನ ಸ್ಥಿತಿ ನೋಡಿದರೆ, ಈ ರೀತಿಯ ಅನುಮಾನ ಬರುವುದು ಸಹಜವೇ. ಆದರೆ, ಇತಿಹಾಸದ ಪುಟಗಳನ್ನು ವಿಶ್ಲೇಷಿಸಿ ನೋಡಿ. ಕೇರಳದ ಕಾಲಟಿಯ ಶಂಕರರು 2000 ವರ್ಷದ ಹಿಂದೆ ಹಿಮಾಲಯಕ್ಕೆ ಹೋಗಿ ಬರುತ್ತಾರೆ. ಅವರು ದೇಶಾದ್ಯಂತ ಸಂಚರಿಸಿ ಆಶ್ರಮಗಳನ್ನು ಸ್ಥಾಪಿಸುತ್ತಾರೆ. ಸಹಸ್ರಾರು ಸಂಖ್ಯೆಯ ಶಿಷ್ಯರನ್ನು ಸಂಪಾದಿಸುತ್ತಾರೆ. ಚಂಡಾಲನೊಡನೆಯೂ ಸಂಭಾಷಿಸುತ್ತಾರೆ. ದೇಶಾದ್ಯಂತ ಎಲ್ಲರೂ ಒಂದೇ ಭಾಷೆಯಲ್ಲಿ ವ್ಯವಹರಿಸದಿದ್ದರೆ ಇದು ಸಾಧ್ಯವೇ? ಆ ಕಾಲದಲ್ಲಿ ಇಂಗ್ಲಿಷಿನ ವ್ಯವಹಾರವಿರಲಿಲ್ಲ ಅಲ್ಲವೇ? ಹಾಗಿದ್ದರೆ ದೇಶಾದ್ಯಂತೆ ಸಂಸ್ಕೃತವಲ್ಲದೆ ಇನ್ಯಾವ ಭಾಷೆಯನ್ನು ಎಲ್ಲರೂ ಮಾತನಾಡುತ್ತಾ ಇದ್ದಿರಬಹುದು?

ಸುಪ್ರಸಿದ್ಧ ಗಾಂಧಿವಾದಿ ಧರ್ಮಪಾಲ್ ಅವರು ರಚಿಸಿರುವ The Beautiful Tree ಪುಸ್ತಕದಲ್ಲಿ (http://www.arvindguptatoys.com/arvindgupta/beautifultree.pdf) 18ನೇ ಶತಮಾನದ ಭಾರತದ ಸ್ಥಿತಿಯನ್ನು ದಾಖಲಿಸಿದ್ದಾರೆ. ಅದಕ್ಕೆ ಅವರು ಆಧರಿಸಿರುವುದು ಅಂದಿನ ಬ್ರಿಟಿಷ್ ಸರಕಾರ ರಚಿಸಿರುವ ಗೆಜೆಟಿಯರ್ ಗಳನ್ನೇ. ಅದರಲ್ಲಿ ಮದರಾಸು ಪ್ರಾಂತದ ಶಾಲೆಗಳ ಅಂಕಿ-ಸಂಖ್ಯೆಯ ದಾಖಲಾತಿಯಿದೆ. ಅದರ ಪ್ರಕಾರ, ಮದರಾಸು ಪ್ರಾಂತದಲ್ಲಿ ಸಾಕ್ಷರತೆಯ ಪ್ರಮಾಣ ಬಹಳ ಉತ್ತಮವಾಗಿತ್ತು. ಗುರುಕುಲ ಪದ್ದತಿ ಜಾರಿಯಲ್ಲಿತ್ತು. ಗುರುಕುಲಗಳಲ್ಲಿ ಸಂಸ್ಕೃತದ ಶಿಕ್ಷಣ ನೀಡಲಾಗುತ್ತಿತ್ತು. ಆ ಗುರುಕುಲಗಳಲ್ಲಿ ಗಂಡು ಮಕ್ಕಳಷ್ಟೇ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳೂ ಕಲಿಯುತ್ತಿದ್ದರು. ಬ್ರಾಹ್ಮಣರ ಮಕ್ಕಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಇತರ ಜಾತಿಯ ಮಕ್ಕಳು ಕಲಿಯುತ್ತಿದ್ದರು. ಇತ್ಯಾದಿ ಸಂಗತಿಗಳನ್ನು ದಾಖಲಿಸಿದ್ದಾರೆ. ನಿಕರ ಅಂಕಿ ಅಂಶಗಳಿಗೆ ಆ ಪುಸ್ತಕವನ್ನು ನೋಡಬಹುದು.
ಅಂದರೆ, 18ನೇ ಶತಮಾನದಲ್ಲಿಯೂ ಸಂಸ್ಕೃತವನ್ನು ಕಲಿಸಲಾಗುತ್ತಿತ್ತು.

18ನೇ ಶತಮಾನದಲ್ಲಿ ಸುಪ್ರಸಿದ್ಧರಾಗಿದ್ದ ಸ್ವಾಮಿ ದಯಾನಂದ ಸರಸ್ವತಿಯವರಿಗೆ ಸಂಸ್ಕೃತವನ್ನು ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲವಂತೆ. ಅವರು ಸತ್ಯಾರ್ಥ ಪ್ರಕಾಶ ಎಂಬ ಉದ್ಗ್ರಂಥವನ್ನು ಸಂಸ್ಕೃತದಲ್ಲಿ ರಚಿಸಿದರು. ಅವರು ನೂರಾರು ಕಡೆಗಳಲ್ಲಿ ಉಪನ್ಯಾಸ ನೀಡುತ್ತಿದ್ದರು - ಎಲ್ಲವೂ ಸಂಸ್ಕೃತದಲ್ಲಿ. ಸಂಸ್ಕೃತ ಅರ್ಥ ಮಾಡಿಕೊಳ್ಳದ, ಮಾತನಾಡದ ಜನ ಇದ್ದಿದ್ದರೆ ಇದೆಲ್ಲವೂ ಸಾಧ್ಯವಾಗುತ್ತಿತ್ತೇ?

1836ರ ನಂತರದಲ್ಲಿ ಬ್ರಿಟಿಷ ಸರಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದ ಲಾರ್ಡ್ ಮೆಕಾಲೆ ಇಂಗ್ಲಿಷ್ ಶಿಕ್ಷಣವನ್ನು ಜಾರಿಗೊಳಿಸುವುದಕ್ಕಾಗಿ, ಗುರುಕುಲಗಳಿಗೆ, ಸಂಸ್ಕೃತ ವಿದ್ಯಾಪೀಠಗಳಿಗೆ ಸರಕಾರ ನೀಡುತ್ತಿದ್ದ ಸಹಾಯ ಧನವನ್ನು ನಿಲ್ಲಿಸಿಬಿಟ್ಟರು. ಮತ್ತು ಇಂಗ್ಲಿಷ್ ಕಲಿತವರಿಗೆ ಮಾತ್ರ ಸರಕಾರಿ ಹುದ್ದೆಗಳನ್ನು ನೀಡಲಾರಂಭಿಸಿದರು. ಇದರಿಂದಾಗಿ ಗುರುಕುಲಗಳು ಮತ್ತು ಸಂಸ್ಕೃತ ವಿದ್ಯಾಪೀಠಗಳು ಅಸ್ತಮಿಸಿದವು.
(ಇಂದಿನ ಸ್ಥಿತಿ ಮುಂದುವರೆದರೆ, ಇನ್ನು 25 ವರ್ಷಗಳಲ್ಲಿ ಕನ್ನಡ ಮತ್ತು ಇನ್ನಿತರ ದೇಸೀ ಭಾಷೆಗಳಿಗೂ ಇದೇ ಸ್ಥಿತಿ ಬಂದರೆ ಆಶ್ಚರ್ಯವಿಲ್ಲ)

Narendra Kumar S.S said...

http://www.sanskrit.nic.in/aboutsanskrit1.htm