ದೇವಾಲಯ ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪಗಳ ಅಧ್ಯಯನದ ನೆಪದಲ್ಲಿ ಊರೂರು ಸುತ್ತುತ್ತಿದ್ದೆ. ಎಲ್ಲೇ ಹೋಗಲಿ ದೇವಾಲಯಗಳಿದ್ದಲ್ಲಿ -ಅದರಲ್ಲೂ ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಯ ಆಡಳಿತದಲ್ಲಿರುವ ದೇವಾಲಯಗಳ ಪರಿಸರದಲ್ಲಿ ಈ ವಾನರ ಸೇನೆಯದ್ದೇ ಕಾರುಬಾರು. ಬಂದವರು ತಾವಾಗೆ ತಿನ್ನಲು ಕೊಟ್ಟರೆ ಸರಿ, ಇಲ್ಲದಿದ್ದರೆ ಅವೇ ಸಂಪಾದನೆಗೆ ಇಳಿದುಬಿಡುತ್ತವೆ. ಹೀಗೆ ಅಚಾನಕ್ಕಾಗಿ ಎದುರಾದ ಫೋಟೋಪ್ರಿಯ ಮಿತ್ರರನ್ನೆಲ್ಲಾ ಒಂದೆಡೆ ಕಲೆ ಹಾಕಿದ್ದೀನಿ, ಕೆಲವನ್ನು ಇಲ್ಲಿ ಕೊಟ್ಟಿದ್ದೇನೆ, ನೋಡಿ.
ಕಡ್ಲೆಕಾಯಿಗಾಗಿ ಹೈಜಂಪ್...!
ಊಟಕ್ಕೆ ಮೊದಲಿನ ಮಾತುಕಥೆ
ಬಂದುಹೋಗುವವರ ನಡುವೆ ಹೊಟ್ಟೆ ತುಂಬಿಸುವರ ನಿರೀಕ್ಷೆಯಲ್ಲಿ
ನಿರೀಕ್ಷೆಯ ತುದಿಯಲ್ಲಿ ಒಂದು ಸಣ್ಣ ನಿದ್ದೆ
ಸಿಕ್ಕಿದ್ದನ್ನು ಶೇರ್ ಮಾಡಿಕೊಳ್ಳೋಣವೇ!?
ಒರಿಸ್ಸಾದ ಉದಯಗಿರಿ-ಖಂಡಗಿರಿ ಗುಹಾಲಯಗಳ ಹತ್ತಿರದ ರಾತ್ರಿ ಕಾವಲುಗಾರರು
ಉದಯಗಿರಿಯ ದೇವಾಲಯವೊಂದರ ಶಿಖರವೇ ವಾಚ್ ಟವರ್!
ಉದಯಗಿರಿಯ ತಪ್ಪಲಲ್ಲಿ
ಉದಯಗಿರಿಯ ಗುಹೆಗಳ ಮೇಲೆ ಮಂತ್ರಾಲೋಚನೆ
ಅಮ್ಮನ ಮಡಿಲಲ್ಲಿ
ಸ್ತನ್ಯಪಾನ - ಅಮೃತಪಾನ
ಪಟ್ಟದಕಲ್ಲು ದೇವಾಲಯಗಳ ಕಾವಲುಗಾರ - 1
ಪಟ್ಟದಕಲ್ಲು ದೇವಾಲಯಗಳ ಕಾವಲುಗಾರ - 2
ಎಲಿಫೆಂಟಾದಲ್ಲಿ ಕಂಡ ಸಂಸಾರ
ಬದಾಮಿ ಗುಹೆಗಳ ಹೊರಭಾಗದಲ್ಲಿ ವಾಚ್ ಮನ್!
6 comments:
ಸರ್..
ಫೋಟೊಗಳ ಸಂಗಡ..
ನಿಮ್ಮ ವಿವರಣೆ..
ಕೋತಿಗಳ ಚೇಷ್ಟೆ..
ಮಜ ಬಂತು..
ಖುಷಿಯೂ ಆಯಿತು...
ಧನ್ಯವಾದಗಳು..
ಎಲ್ಲಾ ಚಿತ್ರಗಳು ಮಜವಾಗಿವೆ...:) ಆದರೆ ಅಮ್ಮನ ಮಡಿಲಲ್ಲಿ ಫೋಟೋ ಮಾತ್ರ ತುಂಬಾ ಇಷ್ಟವಾಯಿತು.
ತುಂಬಾ ಚೆನ್ನಾಗಿವೆ ಫೋಟೋ ಅದಕ್ಕೆ ತಕ್ಕ ಹೊಕ್ಕಣಿ ಹ ಹ ಮಂಗನ ಚೇಷ್ಟೆ ಅದರ ಸಂಸಾರ ಎಲ್ಲವನ್ನು ನೋಡೋ ಕುಶಿ ನಮಗಾಗಿದೆ...
ಹೀಗೆ ಹಲವು ಚಿತ್ರಗಳು ಬರಲಿ
oLLe collection
ಮಂಗಗಳ ಚಿತ್ರಗಳು ಇಷ್ಟು ಚೆನ್ನಾಗಿರಬಹುದು ಎಂದು ಅನಿಸಿರಲಿಲ್ಲ. ಈ ಚಿತ್ರಗಳನ್ನು ನೋಡುತ್ತಿದ್ದರೆ ಅವುಗಳ ಬಗೆಗೆ ಆಪ್ತತ್ವ ಭಾಸವಾಗುತ್ತದೆ.
ಸರ್,
ತುಂಬಾ ಚೆನ್ನಾಗಿವೆ. ಫೋಟೋಗಳ ಜೊತೆ ವಿವರಣೆಗಳೂ ಸಹ.
ಉದಯಗಿರಿ ಎಲ್ಲಿರುವುದು? ಫೋಟೋಗ್ರಫಿಗೆ ಆ ಸ್ಥಳ ಚೆನ್ನಾಗಿರುವಂತಿದೆ.
Post a Comment