ಒಲೆಯೆಂಬುದು ಬಕಾಸುರ
ಇಕ್ಕಿದ್ದೆಲ್ಲವನ್ನೂ ಮುಕ್ಕಿ
ಕ್ಷಣಮಾತ್ರದಲ್ಲಿ ಬೂದಿ ಮಾಡಿ
ಮಲಗಿಬಿಡುತ್ತದೆ ತಣ್ಣಗೆ!
ಒಲೆಯ ಮೇಲೆ ಮಡಕೆ
ಮಡಕೆ ತುಂಬ ನೀರು
ನೀರೊಳಗೆ ಸಾಕಷ್ಟು ಕೂಳು
ಇದ್ದರಷ್ಟೆ ಚೆಂದ
ಹೊಟ್ಟೆಗೊಂದಿಷ್ಟು ತಣ್ಣಗೆ!
ಬರಿದೆ ಮಡಕೆ ಕಾಯ್ದೀತು ಎಷ್ಟು?
ಸಣ್ಣ ಶಬ್ದ ಎಲ್ಲೋ ಬಿರುಕು
ಅಲ್ಲಿ ಬರ ಇಲ್ಲಿ ನೆರೆ
ಅಲ್ಲಿ ತಳಮಳ ಇಲ್ಲಿ ಆಹಾಕಾರ
ಕಾಯ್ದು ಕಾಯ್ದು ಬ್ರಹ್ಮರಂಧ್ರ
ಸಿಡಿವನ್ನಗಂ
ತಣಿಯಬೇಕು ತಣ್ಣಗೆ!
ಚಿತ್ರಕೃಪೆ : ಅಂತರಜಾಲ
6 comments:
ಚೆನ್ನಾಗಿದೆ ಕವನ. ಸಾಂದರ್ಭಿಕ ವಿಷಯಗಳ ಬಗ್ಗೆ ಬರೆದಿದ್ದರೂ ಕವನ ಸೊಗಸಾಗಿ ಮೂಡಿದೆ.
ಸತ್ಯನಾರಾಯಣ ಸರ್,
ಈ ಸಮಯದಲ್ಲಿ ಉತ್ತಮ ಸಮಯೋಜಿತ ಪದ್ಯ. ಒಲೆ ಮತ್ತು ಮತ್ತು ಮಡಿಕೆಯನ್ನು ಚೆನ್ನಾಗಿ ಬಳಸಿಕೊಂಡಿದ್ದೀರಿ..
ಉತ್ತಮ ಕವನ, ಒಳ ಅರ್ಥ ಇಷ್ಟವಾಯಿತು
ಭೂಮಿಯನ್ನು ಒಲೆಯ ಮೇಲಿಟ್ಟ ಮಡಕೆಗೆ ಹೋಲಿಸುತ್ತಾ ಅದರಲ್ಲಿ ಏನಿದ್ದರೆ ಚೆಂದ ಎಂದು ಹೇಳುತ್ತಲೇ ಬೇಡವಾದದ್ದನು ಇಟ್ಟರೆ ಏನೆಲ್ಲ ಅನಾಹುತವಾಗಬಹುದು ಎನ್ನುವದನ್ನು ಸೂಚ್ಯವಾಗಿ ಹೇಳುವ ನಿಮ್ಮ ಕವನ ಮಾರ್ಮಿಕವಾಗಿದೆ ಹಾಗೂ ಸಂದರ್ಭೋಚಿತವಾಗಿದೆ. ಅಭಿನಂದನೆಗಳು.
olleya kavana sir:)
ಜಾಗತಿಕ ತಾಪಮಾನದ ಏರುವಿಕೆಗೆ ಒಳ್ಳೆಯ ಪ್ರತಿಮೆಗಳನ್ನು ಬಳಸಿ ಅರ್ಥಪೂರ್ಣ ಕವನ ರೂಪಿಸಿದ್ದೀರಿ.
Post a Comment