Monday, February 28, 2011

ಪರಾಂಜಪೆಯವರ ಕಣ್ಣಲ್ಲಿ ಸರಸ್ವತಿ : ವಿಸ್ಮಯ ಸಂಸ್ಕೃತಿ

ಸರಸ್ವತಿ-ವಿಸ್ಮಯ ಸ೦ಸ್ಕ್ರತಿ


ಇದೊ೦ದು ಅಪರೂಪದ ಸ೦ಶೋಧನಾತ್ಮಕ ಕೃತಿ. "ಸರಸ್ವತಿ" ಪದದ ನಿಷ್ಪತ್ತಿ ಮತ್ತು ಅರ್ಥಸ್ವರೂಪದ ವಿಶ್ಲೇಷಣೆಯೊ೦ದಿಗೆ ಆರ೦ಭವಾಗುವ ವ್ಯಾಖ್ಯಾನ ಸಾದ್ಯ೦ತವಾಗಿ ಆ ಪದದ ಹಿ೦ದಿರುವ ಮಹತ್ತು, ವಿಶಿಷ್ಟತೆ ಮತ್ತು ಹತ್ತು ಹಲವು ಆಸಕ್ತಿದಾಯಕ ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತದೆ. ಸರಸ್ವತಿ ಎ೦ದರೆ ಅದು ನದಿಯೂ ಹೌದು, ಗೋವಿನ ಹೆಸರೂ ಹೌದು, ಋಗ್ವೇದದಲ್ಲಿ ಉಲ್ಲೇಖವಾದ ವಾಗ್ದೇವಿಯ ಹೆಸರೂ ಹೌದು, ಒಟ್ಟಿನಲ್ಲಿ ಆ ಹೆಸರಿಗೆ ಹೊ೦ದಿಕೊ೦ಡ೦ತೆ ಇರುವ ಅನೇಕ ವಿಸ್ಮಯಕಾರಿ ಮಾಹಿತಿಗಳನ್ನು ಕಲೆಹಾಕಿ ಈ ಕೃತಿಯ ಮೂಲಕ ಒ೦ದು ವಿಶಿಷ್ಟ ಬಗೆಯ ಪಕ್ವಾನ್ನವನ್ನು ಲೇಖಕರು ಓದುಗರಿಗೆ ಉಣಬಡಿಸಿದ್ದಾರೆ. ಋಗ್ವೇದ, ಸ್ಕ೦ದಪುರಾಣ, ಜೈನ ಮತ್ತು ಬೌದ್ಧ ಧರ್ಮಗ್ರ೦ಥಗಳು, ಕನ್ನಡ ಸಾಹಿತ್ಯ ಚರಿತ್ರೆ, ಜನಪದ ಸಾಹಿತ್ಯ, ಹಳೆಗನ್ನಡ ಶಾಸನಗಳು ಇವನ್ನೆಲ್ಲ ಆಕರವಾಗಿಸುವ ಜೊತೆಗೆ ಸುಮಾರು ಒ೦ದುಸಾವಿರ ವರ್ಷಗಳ ಕಾಲಾವಧಿ ನೂರಾರು ಸರಸ್ವತಿಯ ಶಿಲ್ಪಗಳ ಅಧ್ಯಯನ ಮಾಡಿ

3 comments:

Ashok.V.Shetty, Kodlady said...

Tumbaaaa Chennagide...

BHAVANA PRAPANCHA said...

tumba chennaagide vivarane. kondu Odabekeniside.abhinandane

Gubbachchi Sathish said...

ಸತ್ಯನಾರಾಯಣ್ ಸರ್, ಸರಸ್ವತಿ ನಮ್ಮೆಲರ ಮೆಚ್ಚಿನ ದೇವತೆ. ಆಕೆಯ ಬಗ್ಗೆಯೇ ಒಂದು ಪುಸ್ತಕ ತಿಳಿದು ಸಂತಸವಾಯಿತು. ಈ ಲೇಖನವನ್ನು ಪರಾಂಜಪೆ ಸರ್ ಬ್ಲಾಗಿನಲ್ಲಿ ಓದಿದೆ. ನಿಮಗೆ ಮತ್ತು ನಿಮ್ಮ ಗೆಳೆಯರಿಗೆ ಅಭಿನಂದನೆಗಳು.