ಶಿಶುಪ್ರಾಸಗಳು ಜಾನಪದ ಸಾಹಿತ್ಯದ ಒಂದು ಪ್ರಾಕಾರ. ಇವುಗಳಲ್ಲಿ ಅರ್ಥಕ್ಕೂ ಹಾಗೂ ಅರ್ಥಕ್ಕಿಂತ (ಹೆಸರೇ ಹೇಳುವಂತೆ) ಪ್ರಾಸಕ್ಕೂ ಲಯಕ್ಕೂ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಇವು ಕರ್ನಾಟಕದಾದ್ಯಂತ ಕೇಳಸಿಗುತ್ತವೆ. ಆದರೆ ಇತ್ತೀಚಿನ ಆಧುನೀಕರಣ ಪ್ರಕ್ರಿಯೆಯಿಂದಾಗಿ, ವಿಭಕ್ತ ಕುಟುಂಬಗಳಿಂದಾಗಿ ಇಂತಹ ಶಿಶುಪ್ರಾಸಗಳಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ.ನಮ್ಮ ಬಯಲಸೀಮೆಯಲ್ಲಿ (ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೋಕು) ಹಲವಾರು ಶಿಶುಪ್ರಾಸಗಳು ಪ್ರಚಲಿತದಲ್ಲಿವೆ. ಗಾದೆ, ಒಗಟುಗಳ ರೂಪವೂ ಅವಕ್ಕಿವೆ ಹಾಗೂ ಕ್ರೀಡಾ ಸ್ವರೂಪವೂ ಇದೆ. ಭಾಷೆಯು ಬದಲಾದಂತೆ, ಆಯಾಯ ಪ್ರಾಂತ್ಯದ ವೈಶಿಷ್ಟ್ಯವನ್ನು ಅವು ಮೈಗೂಡಿಸಿಕೊಂಡಿರುತ್ತವೆ. ಉದಾಹರಣೆಗೆ,
ಕಬಡ್ಡಿ ಕಬಡ್ಡಿ ಕಾರ
ಹುಳ್ಳಿ ಹೊಲದಲ್ಲಿ ಕೀರ
ಇದು ನಮ್ಮ ಪ್ರದೇಶದಲ್ಲಿ ಅತ್ಯಂತ ಜನಪ್ರಿಯ ಹಾಗೂ ಸರಳ ಶಿಶುಪ್ರಾಸ. ಆದರೆ ಇದನ್ನು ಮಂಡ್ಯ, ಕೊಳ್ಳೆಗಾಲದ ಕಡೆ
ಕಬಡ್ಡಿ ಕಬಡ್ಡಿ ಕಾರ
ಕಬ್ಬಿನ ಗದ್ದೆಲಿ ಕೀರ
ಎಂದು ಹೇಳುತ್ತಾರೆ.
ಬಯಲಸೀಮೆಯಲ್ಲಿ ಹುಳ್ಳಿ (ಹುರುಳಿ) ಬೆಳೆಯನ್ನು ಹೆಚ್ಚಾಗಿ ಬೆಳೆಯುವುದರಿಂದ, ಅದರ ಹೆಸರನ್ನು ಬಳಸಿದರೆ, ಕಬ್ಬನ್ನು ಹೆಚ್ಚಾಗಿ ಬೆಳೆಯುವ ಪ್ರದೇಶಗಳಲ್ಲಿ ಕಬ್ಬಿನ ಹೆಸರನ್ನು ಹೆಚ್ಚಾಗಿ ಬಳಸುವುದನ್ನು ಗಮನಿಸಬಹುದಾಗಿದೆ.ನಮ್ಮ ಕಡೆ ಕೇಳಸಿಗುವ ಹಾಗೂ ನನ್ನ ನೆನಪಿನಲ್ಲಿ ಉಳಿದಿರುವ ಕೆಲವು ಶಿಶುಪ್ರಾಸಗಳನ್ನು, ನನ್ನ ಮಗಳಿಗೆ ಹೇಳಿಕೊಡುವ ನೆಪದಲ್ಲಿ ಆಗಾಗ ಮನಸ್ಸಿಗೆ ತಂದುಕೊಳ್ಳುತ್ತಿರುತ್ತೇನೆ. ಅವುಗಳನ್ನು ಒಂದು ಕಡೆ ಸಂಗ್ರಹಿಸಿ ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾದದ್ದು ರೂಪಶ್ರೀ ಎನ್ನುವವರ ಬ್ಲಾಗಿನಲ್ಲಿ, ‘ಕಣ್ಣಾಮುಚ್ಚೆ ಕಾಡಿಗೆ ಓಡೆ’ ಎಂಬ ಶಿಶುಪ್ರಾಸವನ್ನು ನೋಡಿದ ಮೇಲೆ. ಇಲ್ಲಿ ಸಂಗ್ರಹವಷ್ಟೇ ನನ್ನ ಕೆಲಸ. ಹೆಚ್ಚಿನ ವಿವರಣೆ, ಸಂಪಾದನೆ, ವಿಶ್ಲೇಷಣೆ ಇವ್ಯಾವುದಕ್ಕೂ ಇಳಿಯದೇ, ನಿಮ್ಮ ಮುಂದೆ ಇಡುತ್ತಿದ್ದೇನೆ. ಓದಿ ಪ್ರತಿಕ್ರಿಯಿಸಿದರೆ, ನಿಮಗನ್ನಿಸಿದ್ದನ್ನು ಹಂಚಿಕೊಂಡರೆ, ನಿಮಗೆ ನೆನಪಿರುವ ಶಿಶುಪ್ರಾಸಗಳನ್ನು ಇತರರೊಂದಿಗೆ ಹಂಚಿಕೊಂಡರೆ ಸಂತೋಷ.
ನಾನು ಹೈಸ್ಕೂಲ್ ಓದಿದ ಕುಂದೂರು ಮಠ ಮತ್ತು ಅದರ ಕುದುರೆ, ಅದರ ಸವಾರಿ ಮಾಡುವ ಸ್ವಾಮಿಜಿಗಳು ನಮ್ಮ ಕಡೆ, ನಮ್ಮ ಕಾಲದಲ್ಲಿ ಕಾಣಸಿಗುತ್ತಿದ್ದವು. ಅದರ ಹಿನ್ನೆಲೆಯಲ್ಲಿರುವ ಶಿಶುಪ್ರಾಸ.
ಬಾಗೂರಯ್ಯ ಬಾಗ್ಲು ತೆಗಿ
ಬಗ್ಗಿ ನೋಡೋಣ
ಕುಂದೂರಯ್ಯ ಕುದುರೆ ಕೊಡು
ಹತ್ತಿ ನೋಡೋಣ!
ಪ್ರಶ್ನೋತ್ತರ ರೂಪದ ಶಿಶುಪ್ರಾಸಗಳೂ ಇರುತ್ತವೆ.
ಕಾಗೆ ಕಾಗೆ ಕೌವ್ವ
ಯಾರು ಬರ್‍ತಾರವ್ವ?
ಮಾವ ಬರ್‍ತನವ್ವ
ಮಾವಗೇನು ಊಟ?
ರಾಗಿಕಲ್ಲಿನ ಗೂಟ!
ಇನ್ನೊಂದು ಗೀತೆ
ಶಾಂತಕ್ಕ ಶಾಂತಕ್ಕ ಚೆನ್ನಾಗಿದಿಯಾ?
ಮಂಚದ ಮೇಲೆ ಮಲಗಿದಿಯಾ?
ಅತ್ಯಂತ ಸರಳ ಶಿಶುಪ್ರಾಸಗಳು ಹೇಗಿರುತ್ತವೆ ನೋಡಿ!
ನಾನು ನೀನು ಜೋಡಿ
ಗಾಡಿ ಕಟ್ಟಿಕೊಂಡು ಓಡಿ
ಹೆಣ್ಣುಮಗಳೊಬ್ಬಳು ತನ್ನ ತಾಯಿಗೆ ಹೇಳುತ್ತಿರುವ ರೀತಿಯ ಒಂದು ಶಿಶುಗೀತೆ ಹೀಗಿದೆ.
ಯವ್ವ ಯವ್ವ ಗೆಣಸೆ
ಕುಕ್ಕೆಲಿ ಕುಣಿಸೆ
ಕರಿಸೀರೆ ಉಡಿಸೆ
ಗಂಡನ ಮನೆಗೆ ಕಳಿಸೆ!
ಆಟ ಆಡುವಾಗ ಬಳಕೆಯಾಗುವ ಶಿಶುಪ್ರಾಸಗಳೂ ಇರುತ್ತವೆ!
ಕಣ್ಣಾಮುಚ್ಚೆ
ಕಾಡಿಗೆ ಓಡೆ
ಉದ್ದಿನ ಮೂಟೆ
ಉರುಳೇ ಹೋಯ್ತು
ನನ್ನ ಹಕ್ಕಿ ಬಿಟ್ಟೇಬಿಟ್ಟೆ
ನಿನ್ನ ಹಕ್ಕಿ ಹಿಡ್ಕೋ ಹಿಡ್ಕೋ!
ಇನ್ನೊಂದು ಆಟದ ಗೀತೆ.
ಅಪ್ಪಪ್ಪಂಡೆ ಆರಿಗೆಜ್ಜೆ
ಊರೆಲ್ಲ ಕೇಳೊ ಗೆಜ್ಜೆ
ಕಲ್ಲ್ ಕಲ್ಲಮ್ಮು
ಮಾಯಿಮೊಗ್ಗು
ಮಲ್ಲಿಸೀರೆ
ಗಿಲೀಟ್!
ಈ ಆಟದ ಮುಂದುವರಿಕೆಯಲ್ಲಿ ಬರುವ ಕೆಲವು ಸಾಲುಗಳು ಹೀಗಿವೆ.
ಕೈ ಕೈ ಎಲ್ಹೋದೋ?
ಸಂತೆಗ್ ಹೋದೋ
ಸಂತೇಲಿ ಏನ್ ತಂದೋ?
ಬಾಳೆಹಣ್ಣು ತಂದೋ
ಬಾಳೆಹಣ್ಣು ಏನ್ ಮಾಡ್ದೆ?
ಒಳ್ಳೆದು ತಿಂದು ಕೆಟ್ಟದ್ದು ಬಾಗ್ಲಿಂದಕ್ಕೆ ಹಾಕ್ದೆ
ಬಾಗ್ಲೇನು ಕೊಡ್ತು?
ಬಾಗ್ಲು ಚಕ್ಕೆ ಕೊಡ್ತು
ಚಕ್ಕೆ ಏನ್ ಮಾಡ್ದೆ?
ಒಲೆಗೆ ಹಾಕ್ದೆ
ಒಲೆ ಏನ್ ಕೊಡ್ತು?
ಬೂದಿ ಕೊಡ್ತು
ಬೂದಿ ಏನ್ ಮಾಡ್ದೆ?
ತಿಪ್ಪೆಗೆ ಹಾಕ್ದೆ
ತಿಪ್ಪೆ ಏನ್ ಕೊಡ್ತು?
ಗೊಬ್ಬರ ಕೊಡ್ತು
ಗೊಬ್ಬರ ಏನ್ ಮಾಡ್ದೆ?
ಹೊಲಕ್ಕೆ ಹಾಕ್ದೆ
ಹೊಲ ಏನ್ ಕೊಡ್ತು?
ಗರಿಕೆ ಕೊಡ್ತು
ಗರಿಕೆ ಏನ್ ಮಾಡ್ದೆ?
ಹಸಿಗೆ ಹಾಕ್ದೆ
ಹಸ ಏನ್ ಕೊಡ್ತು?
ಹಾಲು ಕೊಡ್ತು
ಹಾಲು ಏನ್ ಮಾಡ್ದೆ?
ಬೊಮ್ಮ(ಬ್ರಹ್ಮ)ಗೆ ಕೊಟ್ಟೆ
ಬೊಮ್ಮ ಏನ್ ಕೊಟ್ಟ?
ಹೆಣ್ಣು ಕೊಟ್ಟ
ಹೆಣ್ಣು ಏನ್ ಮಾಡ್ದೆ?
ದೊಡ್ಡ ಕೆರೇಲಿ ನೂಕ್ದೆ, ಚಿಕ್ಕ ಕೆರೆಲಿ ಕೈತೊಳ್ಕೊಂಡೆ!
ಐದಾರು ಮಕ್ಕಳು ಆಡುವಾಗ ಒಬ್ಬರನ್ನು ಆಟದಿಂದ ಕೈ ಬಿಡಬೇಕಾಗಿ ಬರುತ್ತದೆ. ಆಗ ಕೆಳಗಿನ ಶಿಶುಪ್ರಾಸದ ಒಂದೊಂದು ಸೊಲ್ಲನ್ನು ಒಬ್ಬೊಬ್ಬರಿಗೆ ಹೇಳಿ ‘ಕ್ವಟಾಸ್’ ಎಂಬ ಪದ ಬಂದವನನ್ನು ಹೊರಗೆ ಕಳುಹಿಸಲಾಗುತ್ತದೆ. (ಇದನ್ನು ಚಿತ್ರಗೀತೆಯೊಂದರಲ್ಲಿ ಬಳಸಿಕೊಂಡಿದ್ದಾರೆ)
ಅವಲಕ್ಕಿ
ಪವಲಕ್ಕಿ
ಕಾಂಚನ
ಮಿನಮಿನ
ಡಾಂಡೂಂ
ಕಯ್ಯ
ಕ್ವಟಾಸ್!
ಎರಡೂ ಕೈಗಳನ್ನು ಕೈ ಮುಗಿಯುವ ಭಂಗಿಯಲ್ಲಿ ಹಿಡಿದುಕೊಂಡು, ಒಂದೊಂದು ಸೊಲ್ಲಿಗೆ ಒಂದೊಂದು ಜೊತೆ ಬೆರಳನ್ನು ಬಡಿಯುತ್ತಾ ಹಾಡುವ ಶಿಶುಪ್ರಾಸ ಹೀಗಿದೆ.
ಹಬ್ಬ ಬಂತು ಹಬ್ಬ (ಎರಡೂ ಕಿರುಬೆರಳನ್ನು ಒಂದಕ್ಕೊಂದು ತಟ್ಟಬೇಕು)
ಹಬ್ಬಕ್ಕೆ ಅಕ್ಕಿಯಿಲ್ಲ (ಉಂಗುರದ ಬೆರಳು........)
ಸಾಲ ಮಾಡೋಣ (ಮಧ್ಯದ ಬೆರಳು..........)
ಸಾಲ ಯಾರು ತೀರ್‍ಸೋರು? (ತೋರುಬೆರಳು...............)
ನಾನು ಇದ್ದೀನಲ್ಲ (ಎಂದು, ಹೆಬ್ಬೆರಳನ್ನು ಮೇಲೆತ್ತಿ ‘ಡನ್’ ಅನ್ನುವಂತೆ ತೋರಿಸಬೇಕು)
ಒಗಟಿನ ಸ್ವರೂಪವನ್ನು ಪಡೆದಿರುವ ಒಂದು ಶಿಶುಪ್ರಾಸ ಹೀಗಿದೆ. ಸಾಮಾನ್ಯವಾಗಿ ಇದನ್ನು ಹೇಳುವಾಗ ಒಬ್ಬರು ಪ್ರಶ್ನೆ ಕೇಳುತ್ತಿರುವಂತೆ, ಇನ್ನೊಬ್ಬರು ಪಟಪಟನೆ ಉತ್ತರ ಹೇಳುತ್ತಾ ಹೋಗುತ್ತಾರೆ.
ಏರಿ ಹಿಂದೆ ಕೆಂದೆತ್ತು ಬಾಲ ಬೀಸುತ್ತೆ
ಭತ್ತ
ಭತ್ತಕ್ಕೆ ಮೂರು ಮುತ್ತು
ಇಬ್ಬನಿ
ಇಬ್ಬನಿಗೊಬ್ಬಣ್ಣ
ಬಿಸಿಲು
ಬಿಸಿಲಿಗೆ ಬಿರಿಯಣ್ಣ
ಕೆಕ್ಕರಿಕೆ ಹಣ್ಣು
ಕೆಕ್ಕರಿಕೆ ಹಣ್ಣು ಕೆರಿಯಣ್ಣ
ಹಲ್ಲು
ಹಲ್ಲಿಗೆ ಮೂರು ಸೊಲ್ಲು
ಎಲೆ ಅಡಿಕೆ ಸುಣ್ಣ
ನಾಲಿಗೆ ಹೊರಳಲು ಸಹಾಯ ಮಾಡುವಂತಹ ಪದಪುಂಜಗಳನ್ನು ನಾವು ಚಿಕ್ಕ ಹುಡುಗರಾಗಿದ್ದಾಗ, ನಮ್ಮ ಕಡೆ ದೊಡ್ಡವರು ಹೇಳಿಕೊಡುತ್ತಿದ್ದರು. ಅವು ಮೂರು ನೆನಪಿವೆ.
ಅರಳಿಮರಬುಡತಳಿರೊಡೆದೆರಡೆಲೆಯಾಯ್ತು
ತರಿಕೆರೆಕೆರೆಏರಿಮೇಲೆಮೂರುಕರಿಕುರಿಮರಿಮೇಯ್ತಿದ್ವೋ (ಇದನ್ನು ಚಿತ್ರಗೀತೆಯೊಂದರಲ್ಲಿ ಬಳಸಿಕೊಂಡಿದ್ದಾರೆ)
ಸಂಕಂಗಪ್ಪನಮಗಮರಿಸಂಕಂಗಪ್ಪ
ವಾಟೀಸ್ ದಿಸ್
ಹೊಟ್ಟೆಗಿಲ್ಲದೆ ಪುಸ್
ಈ ಸಾಲುಗಳನ್ನು ನಾವು ಮೂರನೇ ತರಗತಿಯಲ್ಲಿದ್ದಾಗ ಹೆಚ್ಚಾಗಿ ಹೇಳಿಕೊಳ್ಳುತ್ತಿದ್ದ ನೆನಪು. ಇದನ್ನು ಯಾವಾಗಲೂ ಹೇಳುತ್ತಿದ್ದುದನ್ನು ಕಂಡು ನಮ್ಮ ತಂದೆ ನನಗೆ ಎರಡೇಟು ಕೊಟ್ಟಿದ್ದು ನೆನಪಿದೆ!
ಇವಲ್ಲದೆ ಅಶ್ಲೀಲವೆನ್ನಬಹುದಾದ ಕೆಲವು ಶಿಶುಪ್ರಾಸಗಳೂ ಇವೆ. ನನಗೆ ನೆನಪಿಗೆ ಬರುತ್ತಿರುವುದು ಎರಡು ಮಾತ್ರ. ಅದರಲ್ಲಿ ಒಂದು ಅರ್ಧ ಮಾತ್ರ! ಆದರೂ ಆ ಒಂದೂವರೆ ಶಿಶುಪ್ರಾಸವನ್ನು ಇಲ್ಲಿ ಟೈಪಿಸಲು ‘ನಮಸೆಮಂ’ (ನನ್ನ ಮನಸ್ಸಿನ ಸೆನ್ಸಾರ್ ಮಂಡಳಿ) ಒಪ್ಪುತ್ತಿಲ್ಲ, ಕ್ಷಮಿಸಿ!
Wednesday, May 27, 2009
Monday, May 25, 2009
‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 16
ಎಂ.ಕೆ.ಸ್ವಾಮಿ ಎಂಬ ವಿದ್ಯಾರ್ಥಿಯೂ ಮತ್ತು ಅವನ ನಾಯಿಯು
ಹಾಸ್ಟೆಲ್ಲಿನ ನನ್ನ ಜೀವನದಲ್ಲಿ ನಾನು ಕಂಡ ನಾಲ್ಕಾರು ವಿಶೇಷ ವಿದ್ಯಾರ್ಥಿಗಳ ಬಗ್ಗೆ ಇಲ್ಲಿ ಹೇಳಬಯಸುತ್ತೇನೆ. ಎಂ.ಕೆ.ಸ್ವಾಮಿ ಎಂಬ ವಿದ್ಯಾರ್ಥಿಯ ಹೆಸರನ್ನು ಮೊದಲೇ ಪ್ರಸ್ತಾಪಿಸಿದ್ದೇನೆ. ನೋಡಲು ಗಟ್ಟಿಮುಟ್ಟಾಗಿ ಆ ವಯಸ್ಸಿಗೆ ತುಸು ಹಚ್ಚೇ ಎನ್ನಿಸುವಂತ ಎತ್ತರಕ್ಕಿದ್ದ ಆತ ಮಂಡ್ಯ ಜಿಲ್ಲೆ, ಕಿಕ್ಕೇರಿ ಕಡೆಯವನು. ಈ ಮೊದಲು ಹೇಳಿದ ಡಿ.ಎಸ್.ಎನ್. ಅವರ ಊರಿಗೆ ಹತ್ತಿರದವನಂತೆ! ಈತ ನನಗಿಂತ ಒಂದು ತರಗತಿ ಮುಂದಿದ್ದ. ಆದ್ದರಿಂದ ಆತನೊಂದಿಗೆ ನನ್ನ ಒಡನಾಟ ಎರಡು ವರ್ಷದ್ದು. ಈತ ಊಟ ಮಾಡುವುದರಲ್ಲಿ, ಕೆಲಸ ಮಾಡುವುದರಲ್ಲಿ ಯಾವಾಗಲೂ ಮುಂದಾಗಿರುತ್ತಿದ್ದ. ಒಮ್ಮೆ ಊಟಕ್ಕೆ ಕುಳಿತನೆಂದರೆ ಏಳು ಮುದ್ದೆಗಳನ್ನಾದರೂ ಸಲೀಸಾಗಿ ಊಟ ಮಾಡಿಬಿಡುತ್ತಿದ್ದ. ಜೊತೆಗೆ ಒಂದೆರಡು ತಟ್ಟೆ ಅನ್ನವನ್ನೂ ಮುಗಿಸಿಬಿಡುತ್ತಿದ್ದ. ವಾರ್ಡನ್ ಅವರೇ ಆತನಿಗೆ ತಿನ್ನುವಷ್ಟು ಊಟ ಬಡಿಸುವಂತೆ ಹೇಳಿಬಿಟ್ಟಿದ್ದರು.
ಆತನಿಗೆ ಧರ್ಮಣ್ಣ ಭಟ್ಟರೆಂದರೆ ಅಚ್ಚುಮೆಚ್ಚು. ಬೆಳೆಯುವ ಹುಡುಗ ಎಂದು ಧರ್ಮಣ್ಣ ಆತ ತಿನ್ನುವಷ್ಟನ್ನು ಬಡಿಸಿಬಿಡುತ್ತಿದ್ದ. ಆದರೆ ಅಪ್ಪಣ್ಣ ಹಾಗಲ್ಲ. ಆತನ ಮನೋಸ್ಥಿತಿ ಸರಿಯಿಲ್ಲದಿದ್ದರೆ, ಅದರ ಸಿಟ್ಟೆಲ್ಲಾ ಹುಡುಗರ ಮೇಲೆ ಹಾಕುತ್ತಿದ್ದ. ಒಬ್ಬರಿಗೆ ಒಂದೂವರೆ ಮುದ್ದೆಗಿಂತ ಹೆಚ್ಚು ಬಡಿಸುತ್ತಿರಲಿಲ್ಲ. ಅನ್ನವನ್ನು ಲೆಕ್ಕಕ್ಕೆ ಎರಡು ಸ್ಪೂನ್ ಎಂದು ಅತ್ಯಂತ ಕಡಿಮೆ ಬಡಿಸುತ್ತಿದ್ದ. ಆ ದಿನಗಳಲ್ಲಿ ಪಾಪ, ಸ್ವಾಮಿಗೆ ಊಟ ಸಾಕಾಗುತ್ತಿರಲಿಲ್ಲ. ಅದಕ್ಕೆ ಆತ ಕಂಡುಕೊಂಡಿದ್ದ ಮಾರ್ಗವೆಂದರೆ ತನ್ನ ಎರಡೂ ಕಡೆ, ಕಡಿಮೆ ಊಟ ತಿನ್ನುವ ಇಬ್ಬರನ್ನು ಊಟಕ್ಕೆ ಕೂರಿಸಿಕೊಳ್ಳುತ್ತಿದ್ದ. ಆ ಇಬ್ಬರಲ್ಲಿ ನಾನೂ ಒಬ್ಬನಾಗಿದ್ದೆ. ಬಡಿಸಲು ಬಂದಾಗ ಏನನ್ನೂ ಬೇಡ ಎನ್ನದೆ ಬಡಿಸಿಕೊಂಡು, ಅದನ್ನು ಎಂ.ಕೆ. ಸ್ವಾಮಿಯ ತಟ್ಟೆಗೆ ವರ್ಗಾಯಿಸಿಬಿಡುತ್ತಿದ್ದೆವು.
ಸ್ವತಃ ಸ್ವಾಮಿಗೇ ಊಟ ಸಾಕಾಗುತ್ತಿರಲಿಲ್ಲವಾದರೂ ಆತ ಒಂದು ನಾಯಿಮರಿಯನ್ನು ಸಾಕಿಕೊಂಡಿದ್ದ. ಅದಕ್ಕೇನು ಆತ ಊಟ ಹಾಕಬೇಕಾಗಿರಲಿಲ್ಲ. ಏಕೆಂದರೆ ಊಟದ ಕೊನೆಯಲ್ಲಿ ಹುಡುಗರೆಲ್ಲ ತಮ್ಮ ತಮ್ಮ ತಟ್ಟೆಗಳಲ್ಲಿ ಉಳಿದದ್ದನ್ನು ಹಾಕಿದರೆ ಅದಕ್ಕೆ ಸಾಕಾಗಿತ್ತು. ಆದರೂ ಎಂ.ಕೆ.ಸ್ವಾಮಿ ಮಾತ್ರ ಒಂದೆರಡು ಗುಕ್ಕನ್ನಾದರೂ ತನ್ನ ಕೈಯಾರೆ ಅದಕ್ಕೆ ತಿನ್ನಿಸುತ್ತಿದ್ದ. ಅದೂ ದಷ್ಟಪುಷ್ಟವಾಗಿ ಬೆಳೆದಿತ್ತು. ಅದಕ್ಕೆ ಆತನೇ ಸ್ನಾನ ಮಾಡಿಸುತ್ತಿದ್ದ. ತನ್ನ ಪಕ್ಕದಲ್ಲಿಯೇ ಮಲಗಿಸಿಕೊಳ್ಳುತ್ತಿದ್ದ. ಒಮ್ಮೆ ಇದನ್ನು ಆಡಿಕೊಂಡವನೊಂದಿಗೆ ಬೆಟ್ ಕಟ್ಟಿ, ನಾಯಿಯೊಂದಿಗೆ ಒಂದೇ ತಟ್ಟೆಯಲ್ಲಿ ಊಟ ಕೂಡ ಮಾಡಿದ್ದ!
ಒಂದೇ ತಟ್ಟೆಯಲ್ಲಿ ಒಂದು ಕಡೆ ಅವನು ಊಟ ಮಾಡುತ್ತಿದ್ದರೆ ಆತನ ಪ್ರೀತಿಯ ನಾಯಿ ತಟ್ಟೆಯ ಇನ್ನೊಂದು ಬದಿಯಲ್ಲಿ ತಿನ್ನುತ್ತಿದ್ದುದ್ದನ್ನು ನಾವೆಲ್ಲಾ ಪರಮಾಶ್ಚರ್ಯವೆಂಬಂತೆ ನೋಡಿದ್ದೆವು. ಅಂದ ಹಾಗೆ ಆತ ಆ ಬೆಟ್‌ನಲ್ಲಿ ಗೆದ್ದದ್ದು, ಮಾರನೆಯ ದಿನ ಬೆಳಿಗ್ಗೆ ಮಂಜಣ್ಣನ ಹೋಟೆಲಿನ ಹತ್ತು ಇಡ್ಲಿಗಳನ್ನು! ಈತನ ಈ ಗಟ್ಟಿತನವನ್ನು ನೋಡಿಯೇ ಡಿ.ಎಸ್.ಎನ್. ತೋಟದ ಕೆಲಸ ಮಾಡಲು ರಜಾದಿನಗಳಲ್ಲಿ ಚಿಕ್ಕಯ್ಯ ಮತ್ತು ನನ್ನಣ್ಣನೊಂದಿಗೆ ಈತನನ್ನೂ ಕರೆದುಕೊಂಡು ಹೋಗಿದ್ದಿರಬಹುದು! ತನ್ನ ಮೂರನೇ ಪ್ರಯತ್ನದಲ್ಲಿ ಆತ ಹತ್ತನೇ ತರಗತಿ ಪಾಸು ಮಾಡಿದ. ನಂತರ ಮಿಲಿಟರಿ ಸೇರಿಕೊಂಡನೆಂದು ಯಾರೋ ಹೇಳಿದ್ದು ನೆನಪಿದೆ.
ಇಂಗ್ಲೀಷ್‌ನಲ್ಲಿ ಇಪ್ಪತ್ತಮೂರುವರೆ ಅಕ್ಷರ!
ಚಂದ್ರಯ್ಯ ಎಂಬ ವಿದ್ಯಾರ್ಥಿ ಐದನೇ ತರಗತಿಯಿಂದಲೂ ಹಾಸ್ಟೆಲ್ಲಿನಲ್ಲಿದ್ದವನು. ಪರಿಶಿಷ್ಟ ಜಾತಿ ಮಾತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಐದನೇ ತರಗತಿಯಿಂದಲೂ ಹಾಸ್ಟೆಲ್ ಸೌಲಭ್ಯ ಒದಗಿಸಲಾಗಿತ್ತು. ನನ್ನದೇ ತರಗತಿಯವನು. ಆದರೆ ಇಂಗ್ಲೀಷ್ ಇರಲಿ ಕನ್ನಡವನ್ನೂ ಓದಲು ಬರೆಯಲು ಬರುತ್ತಿರಲಿಲ್ಲ. ಬಹುಶಃ ಅಷ್ಟು ದಡ್ಡ ವಿದ್ಯಾರ್ಥಿಯನ್ನು ನಾನೆಂದೂ ಕಂಡಿಲ್ಲ. ಆದರೂ ಪ್ರತಿ ವರ್ಷ ಪಾಸಾಗಿ ಹತ್ತನೇ ತರಗತಿಯವರಗೆ ಬಂದಿದ್ದ. ನಾವು ಹತ್ತನೇ ತರಗತಿಯಲ್ಲಿದ್ದಾಗ ವಾರ್ಡನ್ ಜಟಗೊಂಡ ಅವರು ಪಾಠ ಮಾಡುತ್ತಿದ್ದರೆಂದು ಹಿಂದೆ ಹೇಳಿದೆನಲ್ಲ, ಹಾಗೆ ಪಾಠ ಮಾಡುವಾಗ ಅವರು ಒಬ್ಬರ ಕೈಯಲ್ಲಿ ಪಾಠ ಓದಿಸುತ್ತಾ ಬೇರೆಯವರು ಕೇಳಿಸಿಕೊಳ್ಳುವಂತೆ ಹೇಳಿ, ಕೊನೆಯಲ್ಲಿ ತಾವು ಪ್ರಶ್ನೆಗಳನ್ನು ಕೇಳುತ್ತಿದ್ದರು. ಹುಡುಗರು ಉತ್ತರ ಹೇಳದಿದ್ದಾಗ ಅವರೇ ಉತ್ತರವನ್ನು ಹೇಳಿ, ಪರೀಕ್ಷೆಯಲ್ಲಿ ಹೇಗೆ ಬರೆಯಬೇಕೆಂದು ಹೇಳುತ್ತಿದ್ದರು.
ಅದೊಂದು ದಿನ ಚಂದ್ರಯ್ಯನನ್ನು ಓದಲು ಹೇಳಿದರು. ಇಂಗ್ಲೀಷ್ ಪಾಠ. ಪುಸ್ತಕ ಹಿಡಿದುಕೊಂಡು ಎದ್ದು ನಿಂತ ಚಂದ್ರಯ್ಯ ಒಂದೆರಡು ನಿಮಿಷವಾದರೂ ಬಾಯಿ ಬಿಡಲಿಲ್ಲ. ನಮಗೆಲ್ಲಾ ಚಂದ್ರಯ್ಯನ ಬಂಡವಾಳ ಗೊತ್ತಿದ್ದರಿಂದ, ಏನಾಗುತ್ತದೆಯೋ ನೋಡೋಣ ಎಂದು ಕಾದು ಕುಳಿತಿದ್ದೆವು. ‘ಓದೋ...’ ವಾರ್ಡನ್ ಮತ್ತೊಮ್ಮೆ ಹೇಳಿದರು. ಮತ್ತೂ ಒಂದು ನಿಮಿಷ ಕಳೆಯಿತು. ಅವರಿಗೆ ರೇಗಿ, ‘ಏನಲೇ ಮಂಗ್ಯಾ ನನಮಗನ. ಓದು ಎಂದರೆ ಕಣ್ ಬಿಡ್ತಾ ನಿಂತೀಯಲ್ಲೊ. ಕಣ್ಣು ಕಾಣಂಗಿಲ್ಲೇನು. ಹೇಳು’ ಎಂದು ಪುಸ್ತಕ ತಿರುಗಿಸಿ ಬೆರಳಿನಲ್ಲಿ ನಿರ್ದೇಶಿಸುತ್ತಾ ‘ಟಿ.ಹೆಚ್.ಇ. ಅಂದರೆ ‘ದಿ’, ಹೀಗೆ ಹೇಳಲೆ ಮಗನ’ ಎಂದು ಕೂಗಿದರು. ಅವನು ಪ್ರಾಮಾಣಿಕವಾಗಿ ಅಷ್ಟನ್ನು ಮಾತ್ರ ಹೇಳಿ ಮತ್ತೆ ಬಾಯಿಗೆ ಬೀಗ ಬಡಿದುಕೊಂಡ!
ಸಿಟ್ಟಿಗೆದ್ದ ವಾರ್ಡನ್ ‘ಏನಲೇ ಮಗನ ಮೆಟ್ರಿಕ್ ಕಲಿಯಾಕ ಹತ್ತೀಯಾ. ಇಂಗ್ಲೀಷ್ ಅಕ್ಷರ ಬರಾಂಗಿಲ್ಲ ಅಂದ್ರ ಹೆಂಗ! ಹೋಗಲಿ ಇಂಗ್ಲೀಷ್‌ನಾಗ ಎಷ್ಟು ಅಕ್ಷರದಾವಪ್ಪ. ಅದಾರ ಹೇಳು ನೋಡಾನ’ ಎಂದರು.
ಆತ ಯಾವ ಅಳುಕೂ ಇಲ್ಲದೆ ‘ಇಪ್ಪತ್ತನಾಲ್ಕು ಸಾರ್’ ಎಂದು ಬಿಟ್ಟ. ನಾವೆಲ್ಲಾ ‘ಗೊಳ್’ ಎಂದು ನಕ್ಕೆವು. ಆದರೆ ಜಟಗೊಂಡ ಅವರಿಗೆ ನಿಜವಾಗಿ ಸಿಟ್ಟು ಬಂದಿತ್ತು. ಹತ್ತನೇ ತರಗತಿಯಲ್ಲಿ ಓದುತ್ತಿರುವ ಒಬ್ಬ ಹುಡುಗ ಇಷ್ಟರ ಮಟ್ಟಿಗೆ ದಡ್ಡ ಇದ್ದರೆ ಹೇಗೆ ಎಂಬ ಚಿಂತೆ ಅವರದಾಗಿತ್ತು ಎನ್ನಿಸುತ್ತದೆ. ಅಲ್ಲದೆ ಅಲ್ಲಿಯವರೆಗೆ ಒಂದು ವರ್ಷವೂ ಫೇಲ್ ಆಗದೆ ಬಂದಿದ್ದ ಆತನನ್ನು ಕಂಡು ಅವರಿಗೆ ಮೈಯೆಲ್ಲಾ ಉರಿದಿರಬೇಕು.
‘ಹೋಗಲಿ ಮಗನಾ. ಕನ್ನಡನಾದರೂ ಓದುತ್ತೀಯಾ?’ ಅಂದರು. ಆತ ಹೌದೆಂದು ತಲೆಯಾಡಿಸಿದ. ಕನ್ನಡ ಪುಸ್ತಕ ಬಿಡಿಸಿ ಕೊಟ್ಟು ಓದು ಎಂದಾಗ ಮತ್ತೆ ಬಾಯಿಗೆ ಬೀಗ ಬಡಿದುಕೊಂಡವನಂತೆ, ಗೊಮ್ಮಟನಂತೆ ನಿಂತುಬಿಟ್ಟ. ಇದನ್ನು ಕಂಡು ಅವರ ಸಹನೆ ಒಡೆಯಿತು. ಹೊಡೆಯುವಂತೆ ಕೈ ಎತ್ತುತ್ತಾ, ‘ಅಲ್ಲವೋ ಸೂಳಿಮಗನ, ಕನ್ನಡ ಕೂಡ ಓದಾಕೆ ಬರಾಂಗಿಲ್ಲ. ಇಂಗ್ಲೀಷ್‌ನಾಗೆ ಎಷ್ಟು ಅಕ್ಷರ ಅದಾವ ಅಂತ ಗೊತ್ತಿಲ್ಲ....’ ಅಂತ ಅವರು ಹೇಳುತ್ತಿರುವಾಗಲೇ ಚಂದ್ರಯ್ಯ ‘ಗೊತ್ತು ಸಾರ್, ಗೊತ್ತು ಸಾರ್. ಇಪ್ಪತ್ತಮೂರೂವರೆ ಅಕ್ಷರ ಅವೆ ಸಾರ್!’ ಎಂದು ಕೂಗಿಕೊಂಡ.
ಎತ್ತಿದ ಕೈಯನ್ನು ಹಾಗೆಯೇ ಇಳಿಸಿದ ಜಟಗೊಂಡ ಅವರು ಸುಸ್ತಾಗಿ ಅಲ್ಲಿದ್ದ ಟ್ರಂಕ್ ಮೇಲೆ ಕುಳಿತು ಬಿಟ್ಟರು. ಸ್ವಲ್ಪ ಹೊತ್ತಿನ ನಂತರ ‘ಮಗನ ನಾನೀಗಲೇ ಹಾಸ್ಟೆಲ್ ಬಿಟ್ಟು ನಿನ್ನ ಓಡಿಸಿಬಿಡಬಹುದು. ಆದರೆ ಹುಡ್ಗ ಹತ್ತನೇ ತರಗತಿಯವರೆಗೆ ಪಾಸು ಮಾಡಿದ್ದಾನಲ್ಲ ಅಂತ ಯಾರದ್ರು ಕೇಳಿದರೆ ನಾನೇನೂ ಉತ್ತರ ಕೊಡಂಗಿಲ್ಲ. ಆದ್ದರಿಂದ ಇನ್ನೊಂದಾರು ತಿಂಗಳು ಹಾಸ್ಟೆಲ್ಲಿನ ಫ್ರೀ ಊಟ ತಿಂದು, ಪರೀಕ್ಷೆ ಕುಂತ ನಾಟ್ಕ ಮಾಡಿ ಮನಿಗೆ ಹೊರಡು ಮಗನ’ ಎಂದು ದುಃಖದ ಧ್ವನಿಯಲ್ಲಿ ಹೇಳಿ ಎದ್ದು ಹೊರಟರು. ಅಂದು ಪಾಠ ಮುಂದುವರೆಯಲಿಲ್ಲ.
ಟಿ.ಹೆಚ್.ಇ. - ದಿ; ಟಿ.ಐ.ಜಿ.ಇ.ಆರ್. - ಟೈಗರ್ ರಮೇಶ!
ರಮೇಶ ಎಂಬ ಇನ್ನೊಬ್ಬ ವಿದ್ಯಾರ್ಥಿಯಿದ್ದ. ಆತನನ್ನು ಕೆರೆಗಳ್ಳಿ ಎಂದು ಅವನ ಊರಿನ ಹೆಸರಿನಿಂದಲೇ ಕರೆಯುತ್ತಿದ್ದೆವು. ಆತ ಹಿಂದೆ ಹೆಡ್ಮಾಸ್ಟರಾಗಿದ್ದ ವೆಂಕಟಪ್ಪನವರ ದೂರದ ಸಂಬಂಧಿಯಂತೆ! ರನ್ನಿಂಗ್ ರೇಸ್‌ನಲ್ಲಿ ಪ್ರವೀಣನಾಗಿದ್ದ ಆತನಿಗೆ ಎ.ಬಿ.ಸಿ.ಡಿ. ನೋಡಿಕೊಂಡು ಓದಲು ಬರೆಯಲು ಮಾತ್ರ ಬರುತ್ತಿತ್ತು. ಪುಸ್ತಕ ಮುಚ್ಚಿ ಬರೆಯಲಾಗಲೀ, ಪದಗಳ ಸ್ಪೆಲ್ಲಿಂಗ್ ಹೇಳಲಾಗಲೀ ಆತನಿಗೆ ಕೊನೆಯವರೆಗೂ ಬರಲೇಯಿಲ್ಲ. ‘ಹನ್ನೆರಡು ಅಟೆಂಪ್ಟ್ ಆದರೂ ಪಾಸಾಗದಿದ್ದರೆ, ಅವರೇ ಎಲ್ಲರನ್ನು ಗಾಂಧಿ ಪಾಸ್ ಮಾಡುತ್ತಾರೆ’ ಎಂದು ಆತ ಬಲವಾಗಿ ನಂಬಿದ್ದ!
ಒಂದು ದಿನ ಗಣಿತ ಮೇಷ್ಟ್ರಾದ ಜಿ.ಎಸ್.ಎಸ್. ಇಂಗ್ಲೀಷ್ ಕ್ಲಾಸ್ ತೆಗೆದುಕೊಂಡು ಇಂಗ್ಲೀಷ್ ಬಗ್ಗೆ ಪಾಠ ಮಾಡುತ್ತಿದ್ದರು. ಆ ದಿನ ಹಿಂದಿನ ಬೆಂಚಿನಲ್ಲಿ ಕುಳಿತು ಗಲಾಟೆ ಮಾಡುತ್ತಿದ್ದ ಈ ರಮೇಶ ಅವರ ಕಣ್ಣಿಗೆ ಬಿದ್ದ. ಅಪರೂಪಕ್ಕೆ ಇಂಗ್ಲೀಷ್ ಕ್ಲಾಸ್ ತೆಗೆದುಕೊಂಡು ತಮ್ಮ ಇಂಗ್ಲೀಷ್ ಪಾಂಡಿತ್ಯವನ್ನು ಅದ್ಭುತವಾಗಿ ಪ್ರದರ್ಶನ ಮಾಡುತ್ತಿದ್ದ ಬಿಸಿರಕ್ತದ ಯುವ ಮೇಷ್ಟ್ರು ಜಿ.ಎಸ್.ಎಸ್. ಅವರಿಗೆ ಹೇಗಾಗಿರಬೇಡ! ಗಣಿತದ ಕ್ಲಾಸ್‌ನಲ್ಲಿ ರಮೇಶ ದಡ್ಡನೆಂದು ಅವರಿಗೆ ತಿಳಿದಿದ್ದರಿಂದ ಅವನನ್ನು ಎದ್ದು ನಿಲ್ಲಿಸಿ ಪಾಠ ಓದುವಂತೆ ಹೇಳಿದರು. ಪುಸ್ತಕ ಹಿಡಿದು ನಿಂತ ರಮೇಶ ಟಿ.ಹೆಚ್.ಇ. - ದಿ, ಟಿ.ಐ.ಜಿ.ಇ.ಆರ್. - ಟೈಗರ್ ಎಂದು ಅಕ್ಷರಗಳನ್ನು ಹೇಳುತ್ತಾ ನಂತರ ಕೂಡಿಸಿ ಪದವನ್ನು ಹೇಳುತ್ತಾ ಓದತೊಡಗಿದ. ಅವನನ್ನು ಕೀಟಲೆ ಮಾಡಬೇಕೆಂದೋ ಏನೋ ಜಿ.ಎಸ್.ಎಸ್. ‘ಹಿ ಎಂಬುದಕ್ಕೆ ಸ್ಪೆಲ್ಲಿಂಗ್ ಹೇಳು’ ಎಂದರು, ಆತ ಹೇಳಲಿಲ್ಲ. ಅವರು ಅದನ್ನು ಬೋರ್ಡ್ ಮೇಲೆ ಬರೆದು ‘ಇದು ಏನು?’ ಎಂದರು. ಆತ ನಿಧಾನವಾಗಿ ‘ಹೆಚ್.ಇ. - ಹಿ’ ಎಂದು ಹೇಳಿದ. ಅದನ್ನು ಡಸ್ಟರ್‌ನಿಂದ ಒರೆಸಿದ ಜಿಎಸ್.ಎಸ್. ಮತ್ತೆ ‘ಹಿ’ ಎಂಬುದಕ್ಕೆ ಸ್ಪೆಲ್ಲಿಂಗ್ ಹೇಳು’ ಎಂದರು. ಪುಣ್ಯಾತ್ಮ ರಮೇಶ ಬಾಯಿ ಬಿಡಲೇ ಇಲ್ಲ. ಮೇಷ್ಟ್ರೇ ಮೊದಲು ನಗಲು ಪ್ರಾರಂಭಿಸಿದ್ದರಿಂದ ತರಗತಿಯ ಎಲ್ಲರೂ ಗೊಳ್ ಎಂದು ನಗಲಾರಂಭಿಸಿದರು. ಅವರು ಮತ್ತೆ ‘ಷಿ’ ಎಂಬ ಪದವನ್ನೂ ಅದೇ ರೀತಿ ಬರೆದು ಅಳಿಸಿ ಆತನನ್ನು ಗೋಳು ಹುಯ್ದುಕೊಂಡರು. ಇಡೀ ತರಗತಿಯೇ ನಕ್ಕು ನಕ್ಕು ಸುಸ್ತಾಯಿತು.
ಈ ಎರಡು ಘಟನೆಗಳನ್ನು ಇಲ್ಲಿ ನಾನು ಪ್ರಸ್ತಾಪಿಸಲು ಕಾರಣ ಇಷ್ಟೆ. ಇಂಗ್ಲೀಷ್ ಎಂಬುದು ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಭೂತವಾಗಿಯೇ ಕಾಡುತ್ತಿದೆ. ಅದು ನಮ್ಮದಾಗಲು ಸಾಧ್ಯವೇ ಆಗಿಲ್ಲ. ವ್ಯವಸ್ಥೆಯೂ ಅದಕ್ಕೆ ಪೂರಕವಾಗಿಲ್ಲ. ಇಂದೂ ತಕ್ಕಮಟ್ಟಿಗಾದರೂ ಒಳ್ಳೆಯ ಇಂಗ್ಲೀಷ್‌ನ್ನು ಕಲಿಸುವ ಮೇಷ್ಟ್ರುಗಳೂ ಹೆಚ್ಚಿಲ್ಲ. ಬಿ.ಎಸ್ಸಿ. ಪದವಿಯ ನಂತರ ಎರಡು ಸ್ನಾತಕೋತ್ತರ ಪದವಿ, ಒಂದು ಪಿಹೆಚ್.ಡಿ ಮಾಡಿರುವ ನನಗೂ ಇಂಗ್ಲೀಷ್ ಇನ್ನೂ ಕಬ್ಬಿಣದ ಕಡಲೆಯೇ ಆಗಿದೆ! ಆ ವಿಷಯವಾಗಿ ಆಗಾಗ ಕೀಳರಿಮೆಯೂ ಕಾಡುತ್ತದೆ!
ಅಂದಿನಂತೆ ಇಂದಿಗೂ ಇಂಗ್ಲೀಷ್ ಬೇಕೆ ಬೇಡವೇ ಎಂಬುದರ ಬಗ್ಗೆಯೇ ವೃಥಾ ವಾದವಿವಾದಗಳು ನಡೆಯುತ್ತಿರುವುದು ಮಾತ್ರ ದುರದೃಷ್ಟಕರ. ಇಂಗ್ಲೀಷ್ ಬೇಡವೇ ಬೇಡ ಎನ್ನುವವರು ಮೊದಲು ಯೋಚಿಸಬೇಕಾದ್ದು ಇಂಗ್ಲೀಷ್ ಇಂದಿನ ಮತ್ತು ಮುಂದಿನ ಸಂದರ್ಭಗಳಲ್ಲಿ ಅಗತ್ಯವಾಗಿ ಬೇಕಾದ ಭಾಷೆಯಾಗಿದೆಯೆ ಇಲ್ಲವೆ ಎಂಬ ಸಂಗತಿ. ಆಗಿಲ್ಲ ಎಂದು ಮೊಂಡುವಾದ ಹೂಡುವವರಿಗೆ ನಾವೇನು ಮಾಡಲಾಗುವುದಿಲ್ಲ. ಜಾಗತೀಕರಣದ ಒಳ್ಳೆಯ ಫಲವನ್ನು ನಾವು ಅನುಭವಿಸಲು ಸಿದ್ಧರಾಗಿರುವಂತೆ ಅದರಿಂದ ಬರುವ ಕೆಟ್ಟದ್ದನ್ನು ಅನುಭವಿಸಲೂ ನಾವು ಸಿದ್ಧರಿರಬೇಕಾಗುತ್ತದೆ. ಬರುವ ಒಳ್ಳೆಯ ಫಸಲನ್ನು ತಿನ್ನಲು ಕೇವಲ ಒಂದು ವರ್ಗಕ್ಕೆ ಸಾಧ್ಯವಾದರೆ, ಅದರ ಕೆಟ್ಟ ಫಸಲು ಇನ್ನೊಂದು ವರ್ಗಕ್ಕೆ ಮೀಸಲಾಗಬೇಕಾಗುತ್ತದೆ. ಇದಾಗಬಾರದು. ಆದ್ದರಿಂದಲೇ ‘ಒಂದು ಭಾಷೆಯಾಗಿ ಇಂಗ್ಲೀಷ್ ಅಗತ್ಯವಾಗಿ ಬೇಕು’ ಎಂದರೆ ತಪ್ಪು ಎನ್ನಲಾಗುವುದಿಲ್ಲ ಅಲ್ಲವೆ?
ಹಾಸ್ಟೆಲ್ಲಿನ ನನ್ನ ಜೀವನದಲ್ಲಿ ನಾನು ಕಂಡ ನಾಲ್ಕಾರು ವಿಶೇಷ ವಿದ್ಯಾರ್ಥಿಗಳ ಬಗ್ಗೆ ಇಲ್ಲಿ ಹೇಳಬಯಸುತ್ತೇನೆ. ಎಂ.ಕೆ.ಸ್ವಾಮಿ ಎಂಬ ವಿದ್ಯಾರ್ಥಿಯ ಹೆಸರನ್ನು ಮೊದಲೇ ಪ್ರಸ್ತಾಪಿಸಿದ್ದೇನೆ. ನೋಡಲು ಗಟ್ಟಿಮುಟ್ಟಾಗಿ ಆ ವಯಸ್ಸಿಗೆ ತುಸು ಹಚ್ಚೇ ಎನ್ನಿಸುವಂತ ಎತ್ತರಕ್ಕಿದ್ದ ಆತ ಮಂಡ್ಯ ಜಿಲ್ಲೆ, ಕಿಕ್ಕೇರಿ ಕಡೆಯವನು. ಈ ಮೊದಲು ಹೇಳಿದ ಡಿ.ಎಸ್.ಎನ್. ಅವರ ಊರಿಗೆ ಹತ್ತಿರದವನಂತೆ! ಈತ ನನಗಿಂತ ಒಂದು ತರಗತಿ ಮುಂದಿದ್ದ. ಆದ್ದರಿಂದ ಆತನೊಂದಿಗೆ ನನ್ನ ಒಡನಾಟ ಎರಡು ವರ್ಷದ್ದು. ಈತ ಊಟ ಮಾಡುವುದರಲ್ಲಿ, ಕೆಲಸ ಮಾಡುವುದರಲ್ಲಿ ಯಾವಾಗಲೂ ಮುಂದಾಗಿರುತ್ತಿದ್ದ. ಒಮ್ಮೆ ಊಟಕ್ಕೆ ಕುಳಿತನೆಂದರೆ ಏಳು ಮುದ್ದೆಗಳನ್ನಾದರೂ ಸಲೀಸಾಗಿ ಊಟ ಮಾಡಿಬಿಡುತ್ತಿದ್ದ. ಜೊತೆಗೆ ಒಂದೆರಡು ತಟ್ಟೆ ಅನ್ನವನ್ನೂ ಮುಗಿಸಿಬಿಡುತ್ತಿದ್ದ. ವಾರ್ಡನ್ ಅವರೇ ಆತನಿಗೆ ತಿನ್ನುವಷ್ಟು ಊಟ ಬಡಿಸುವಂತೆ ಹೇಳಿಬಿಟ್ಟಿದ್ದರು.
ಆತನಿಗೆ ಧರ್ಮಣ್ಣ ಭಟ್ಟರೆಂದರೆ ಅಚ್ಚುಮೆಚ್ಚು. ಬೆಳೆಯುವ ಹುಡುಗ ಎಂದು ಧರ್ಮಣ್ಣ ಆತ ತಿನ್ನುವಷ್ಟನ್ನು ಬಡಿಸಿಬಿಡುತ್ತಿದ್ದ. ಆದರೆ ಅಪ್ಪಣ್ಣ ಹಾಗಲ್ಲ. ಆತನ ಮನೋಸ್ಥಿತಿ ಸರಿಯಿಲ್ಲದಿದ್ದರೆ, ಅದರ ಸಿಟ್ಟೆಲ್ಲಾ ಹುಡುಗರ ಮೇಲೆ ಹಾಕುತ್ತಿದ್ದ. ಒಬ್ಬರಿಗೆ ಒಂದೂವರೆ ಮುದ್ದೆಗಿಂತ ಹೆಚ್ಚು ಬಡಿಸುತ್ತಿರಲಿಲ್ಲ. ಅನ್ನವನ್ನು ಲೆಕ್ಕಕ್ಕೆ ಎರಡು ಸ್ಪೂನ್ ಎಂದು ಅತ್ಯಂತ ಕಡಿಮೆ ಬಡಿಸುತ್ತಿದ್ದ. ಆ ದಿನಗಳಲ್ಲಿ ಪಾಪ, ಸ್ವಾಮಿಗೆ ಊಟ ಸಾಕಾಗುತ್ತಿರಲಿಲ್ಲ. ಅದಕ್ಕೆ ಆತ ಕಂಡುಕೊಂಡಿದ್ದ ಮಾರ್ಗವೆಂದರೆ ತನ್ನ ಎರಡೂ ಕಡೆ, ಕಡಿಮೆ ಊಟ ತಿನ್ನುವ ಇಬ್ಬರನ್ನು ಊಟಕ್ಕೆ ಕೂರಿಸಿಕೊಳ್ಳುತ್ತಿದ್ದ. ಆ ಇಬ್ಬರಲ್ಲಿ ನಾನೂ ಒಬ್ಬನಾಗಿದ್ದೆ. ಬಡಿಸಲು ಬಂದಾಗ ಏನನ್ನೂ ಬೇಡ ಎನ್ನದೆ ಬಡಿಸಿಕೊಂಡು, ಅದನ್ನು ಎಂ.ಕೆ. ಸ್ವಾಮಿಯ ತಟ್ಟೆಗೆ ವರ್ಗಾಯಿಸಿಬಿಡುತ್ತಿದ್ದೆವು.
ಸ್ವತಃ ಸ್ವಾಮಿಗೇ ಊಟ ಸಾಕಾಗುತ್ತಿರಲಿಲ್ಲವಾದರೂ ಆತ ಒಂದು ನಾಯಿಮರಿಯನ್ನು ಸಾಕಿಕೊಂಡಿದ್ದ. ಅದಕ್ಕೇನು ಆತ ಊಟ ಹಾಕಬೇಕಾಗಿರಲಿಲ್ಲ. ಏಕೆಂದರೆ ಊಟದ ಕೊನೆಯಲ್ಲಿ ಹುಡುಗರೆಲ್ಲ ತಮ್ಮ ತಮ್ಮ ತಟ್ಟೆಗಳಲ್ಲಿ ಉಳಿದದ್ದನ್ನು ಹಾಕಿದರೆ ಅದಕ್ಕೆ ಸಾಕಾಗಿತ್ತು. ಆದರೂ ಎಂ.ಕೆ.ಸ್ವಾಮಿ ಮಾತ್ರ ಒಂದೆರಡು ಗುಕ್ಕನ್ನಾದರೂ ತನ್ನ ಕೈಯಾರೆ ಅದಕ್ಕೆ ತಿನ್ನಿಸುತ್ತಿದ್ದ. ಅದೂ ದಷ್ಟಪುಷ್ಟವಾಗಿ ಬೆಳೆದಿತ್ತು. ಅದಕ್ಕೆ ಆತನೇ ಸ್ನಾನ ಮಾಡಿಸುತ್ತಿದ್ದ. ತನ್ನ ಪಕ್ಕದಲ್ಲಿಯೇ ಮಲಗಿಸಿಕೊಳ್ಳುತ್ತಿದ್ದ. ಒಮ್ಮೆ ಇದನ್ನು ಆಡಿಕೊಂಡವನೊಂದಿಗೆ ಬೆಟ್ ಕಟ್ಟಿ, ನಾಯಿಯೊಂದಿಗೆ ಒಂದೇ ತಟ್ಟೆಯಲ್ಲಿ ಊಟ ಕೂಡ ಮಾಡಿದ್ದ!
ಒಂದೇ ತಟ್ಟೆಯಲ್ಲಿ ಒಂದು ಕಡೆ ಅವನು ಊಟ ಮಾಡುತ್ತಿದ್ದರೆ ಆತನ ಪ್ರೀತಿಯ ನಾಯಿ ತಟ್ಟೆಯ ಇನ್ನೊಂದು ಬದಿಯಲ್ಲಿ ತಿನ್ನುತ್ತಿದ್ದುದ್ದನ್ನು ನಾವೆಲ್ಲಾ ಪರಮಾಶ್ಚರ್ಯವೆಂಬಂತೆ ನೋಡಿದ್ದೆವು. ಅಂದ ಹಾಗೆ ಆತ ಆ ಬೆಟ್‌ನಲ್ಲಿ ಗೆದ್ದದ್ದು, ಮಾರನೆಯ ದಿನ ಬೆಳಿಗ್ಗೆ ಮಂಜಣ್ಣನ ಹೋಟೆಲಿನ ಹತ್ತು ಇಡ್ಲಿಗಳನ್ನು! ಈತನ ಈ ಗಟ್ಟಿತನವನ್ನು ನೋಡಿಯೇ ಡಿ.ಎಸ್.ಎನ್. ತೋಟದ ಕೆಲಸ ಮಾಡಲು ರಜಾದಿನಗಳಲ್ಲಿ ಚಿಕ್ಕಯ್ಯ ಮತ್ತು ನನ್ನಣ್ಣನೊಂದಿಗೆ ಈತನನ್ನೂ ಕರೆದುಕೊಂಡು ಹೋಗಿದ್ದಿರಬಹುದು! ತನ್ನ ಮೂರನೇ ಪ್ರಯತ್ನದಲ್ಲಿ ಆತ ಹತ್ತನೇ ತರಗತಿ ಪಾಸು ಮಾಡಿದ. ನಂತರ ಮಿಲಿಟರಿ ಸೇರಿಕೊಂಡನೆಂದು ಯಾರೋ ಹೇಳಿದ್ದು ನೆನಪಿದೆ.ಇಂಗ್ಲೀಷ್‌ನಲ್ಲಿ ಇಪ್ಪತ್ತಮೂರುವರೆ ಅಕ್ಷರ!
ಚಂದ್ರಯ್ಯ ಎಂಬ ವಿದ್ಯಾರ್ಥಿ ಐದನೇ ತರಗತಿಯಿಂದಲೂ ಹಾಸ್ಟೆಲ್ಲಿನಲ್ಲಿದ್ದವನು. ಪರಿಶಿಷ್ಟ ಜಾತಿ ಮಾತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಐದನೇ ತರಗತಿಯಿಂದಲೂ ಹಾಸ್ಟೆಲ್ ಸೌಲಭ್ಯ ಒದಗಿಸಲಾಗಿತ್ತು. ನನ್ನದೇ ತರಗತಿಯವನು. ಆದರೆ ಇಂಗ್ಲೀಷ್ ಇರಲಿ ಕನ್ನಡವನ್ನೂ ಓದಲು ಬರೆಯಲು ಬರುತ್ತಿರಲಿಲ್ಲ. ಬಹುಶಃ ಅಷ್ಟು ದಡ್ಡ ವಿದ್ಯಾರ್ಥಿಯನ್ನು ನಾನೆಂದೂ ಕಂಡಿಲ್ಲ. ಆದರೂ ಪ್ರತಿ ವರ್ಷ ಪಾಸಾಗಿ ಹತ್ತನೇ ತರಗತಿಯವರಗೆ ಬಂದಿದ್ದ. ನಾವು ಹತ್ತನೇ ತರಗತಿಯಲ್ಲಿದ್ದಾಗ ವಾರ್ಡನ್ ಜಟಗೊಂಡ ಅವರು ಪಾಠ ಮಾಡುತ್ತಿದ್ದರೆಂದು ಹಿಂದೆ ಹೇಳಿದೆನಲ್ಲ, ಹಾಗೆ ಪಾಠ ಮಾಡುವಾಗ ಅವರು ಒಬ್ಬರ ಕೈಯಲ್ಲಿ ಪಾಠ ಓದಿಸುತ್ತಾ ಬೇರೆಯವರು ಕೇಳಿಸಿಕೊಳ್ಳುವಂತೆ ಹೇಳಿ, ಕೊನೆಯಲ್ಲಿ ತಾವು ಪ್ರಶ್ನೆಗಳನ್ನು ಕೇಳುತ್ತಿದ್ದರು. ಹುಡುಗರು ಉತ್ತರ ಹೇಳದಿದ್ದಾಗ ಅವರೇ ಉತ್ತರವನ್ನು ಹೇಳಿ, ಪರೀಕ್ಷೆಯಲ್ಲಿ ಹೇಗೆ ಬರೆಯಬೇಕೆಂದು ಹೇಳುತ್ತಿದ್ದರು.
ಅದೊಂದು ದಿನ ಚಂದ್ರಯ್ಯನನ್ನು ಓದಲು ಹೇಳಿದರು. ಇಂಗ್ಲೀಷ್ ಪಾಠ. ಪುಸ್ತಕ ಹಿಡಿದುಕೊಂಡು ಎದ್ದು ನಿಂತ ಚಂದ್ರಯ್ಯ ಒಂದೆರಡು ನಿಮಿಷವಾದರೂ ಬಾಯಿ ಬಿಡಲಿಲ್ಲ. ನಮಗೆಲ್ಲಾ ಚಂದ್ರಯ್ಯನ ಬಂಡವಾಳ ಗೊತ್ತಿದ್ದರಿಂದ, ಏನಾಗುತ್ತದೆಯೋ ನೋಡೋಣ ಎಂದು ಕಾದು ಕುಳಿತಿದ್ದೆವು. ‘ಓದೋ...’ ವಾರ್ಡನ್ ಮತ್ತೊಮ್ಮೆ ಹೇಳಿದರು. ಮತ್ತೂ ಒಂದು ನಿಮಿಷ ಕಳೆಯಿತು. ಅವರಿಗೆ ರೇಗಿ, ‘ಏನಲೇ ಮಂಗ್ಯಾ ನನಮಗನ. ಓದು ಎಂದರೆ ಕಣ್ ಬಿಡ್ತಾ ನಿಂತೀಯಲ್ಲೊ. ಕಣ್ಣು ಕಾಣಂಗಿಲ್ಲೇನು. ಹೇಳು’ ಎಂದು ಪುಸ್ತಕ ತಿರುಗಿಸಿ ಬೆರಳಿನಲ್ಲಿ ನಿರ್ದೇಶಿಸುತ್ತಾ ‘ಟಿ.ಹೆಚ್.ಇ. ಅಂದರೆ ‘ದಿ’, ಹೀಗೆ ಹೇಳಲೆ ಮಗನ’ ಎಂದು ಕೂಗಿದರು. ಅವನು ಪ್ರಾಮಾಣಿಕವಾಗಿ ಅಷ್ಟನ್ನು ಮಾತ್ರ ಹೇಳಿ ಮತ್ತೆ ಬಾಯಿಗೆ ಬೀಗ ಬಡಿದುಕೊಂಡ!
ಸಿಟ್ಟಿಗೆದ್ದ ವಾರ್ಡನ್ ‘ಏನಲೇ ಮಗನ ಮೆಟ್ರಿಕ್ ಕಲಿಯಾಕ ಹತ್ತೀಯಾ. ಇಂಗ್ಲೀಷ್ ಅಕ್ಷರ ಬರಾಂಗಿಲ್ಲ ಅಂದ್ರ ಹೆಂಗ! ಹೋಗಲಿ ಇಂಗ್ಲೀಷ್‌ನಾಗ ಎಷ್ಟು ಅಕ್ಷರದಾವಪ್ಪ. ಅದಾರ ಹೇಳು ನೋಡಾನ’ ಎಂದರು.
ಆತ ಯಾವ ಅಳುಕೂ ಇಲ್ಲದೆ ‘ಇಪ್ಪತ್ತನಾಲ್ಕು ಸಾರ್’ ಎಂದು ಬಿಟ್ಟ. ನಾವೆಲ್ಲಾ ‘ಗೊಳ್’ ಎಂದು ನಕ್ಕೆವು. ಆದರೆ ಜಟಗೊಂಡ ಅವರಿಗೆ ನಿಜವಾಗಿ ಸಿಟ್ಟು ಬಂದಿತ್ತು. ಹತ್ತನೇ ತರಗತಿಯಲ್ಲಿ ಓದುತ್ತಿರುವ ಒಬ್ಬ ಹುಡುಗ ಇಷ್ಟರ ಮಟ್ಟಿಗೆ ದಡ್ಡ ಇದ್ದರೆ ಹೇಗೆ ಎಂಬ ಚಿಂತೆ ಅವರದಾಗಿತ್ತು ಎನ್ನಿಸುತ್ತದೆ. ಅಲ್ಲದೆ ಅಲ್ಲಿಯವರೆಗೆ ಒಂದು ವರ್ಷವೂ ಫೇಲ್ ಆಗದೆ ಬಂದಿದ್ದ ಆತನನ್ನು ಕಂಡು ಅವರಿಗೆ ಮೈಯೆಲ್ಲಾ ಉರಿದಿರಬೇಕು.
‘ಹೋಗಲಿ ಮಗನಾ. ಕನ್ನಡನಾದರೂ ಓದುತ್ತೀಯಾ?’ ಅಂದರು. ಆತ ಹೌದೆಂದು ತಲೆಯಾಡಿಸಿದ. ಕನ್ನಡ ಪುಸ್ತಕ ಬಿಡಿಸಿ ಕೊಟ್ಟು ಓದು ಎಂದಾಗ ಮತ್ತೆ ಬಾಯಿಗೆ ಬೀಗ ಬಡಿದುಕೊಂಡವನಂತೆ, ಗೊಮ್ಮಟನಂತೆ ನಿಂತುಬಿಟ್ಟ. ಇದನ್ನು ಕಂಡು ಅವರ ಸಹನೆ ಒಡೆಯಿತು. ಹೊಡೆಯುವಂತೆ ಕೈ ಎತ್ತುತ್ತಾ, ‘ಅಲ್ಲವೋ ಸೂಳಿಮಗನ, ಕನ್ನಡ ಕೂಡ ಓದಾಕೆ ಬರಾಂಗಿಲ್ಲ. ಇಂಗ್ಲೀಷ್‌ನಾಗೆ ಎಷ್ಟು ಅಕ್ಷರ ಅದಾವ ಅಂತ ಗೊತ್ತಿಲ್ಲ....’ ಅಂತ ಅವರು ಹೇಳುತ್ತಿರುವಾಗಲೇ ಚಂದ್ರಯ್ಯ ‘ಗೊತ್ತು ಸಾರ್, ಗೊತ್ತು ಸಾರ್. ಇಪ್ಪತ್ತಮೂರೂವರೆ ಅಕ್ಷರ ಅವೆ ಸಾರ್!’ ಎಂದು ಕೂಗಿಕೊಂಡ.
ಎತ್ತಿದ ಕೈಯನ್ನು ಹಾಗೆಯೇ ಇಳಿಸಿದ ಜಟಗೊಂಡ ಅವರು ಸುಸ್ತಾಗಿ ಅಲ್ಲಿದ್ದ ಟ್ರಂಕ್ ಮೇಲೆ ಕುಳಿತು ಬಿಟ್ಟರು. ಸ್ವಲ್ಪ ಹೊತ್ತಿನ ನಂತರ ‘ಮಗನ ನಾನೀಗಲೇ ಹಾಸ್ಟೆಲ್ ಬಿಟ್ಟು ನಿನ್ನ ಓಡಿಸಿಬಿಡಬಹುದು. ಆದರೆ ಹುಡ್ಗ ಹತ್ತನೇ ತರಗತಿಯವರೆಗೆ ಪಾಸು ಮಾಡಿದ್ದಾನಲ್ಲ ಅಂತ ಯಾರದ್ರು ಕೇಳಿದರೆ ನಾನೇನೂ ಉತ್ತರ ಕೊಡಂಗಿಲ್ಲ. ಆದ್ದರಿಂದ ಇನ್ನೊಂದಾರು ತಿಂಗಳು ಹಾಸ್ಟೆಲ್ಲಿನ ಫ್ರೀ ಊಟ ತಿಂದು, ಪರೀಕ್ಷೆ ಕುಂತ ನಾಟ್ಕ ಮಾಡಿ ಮನಿಗೆ ಹೊರಡು ಮಗನ’ ಎಂದು ದುಃಖದ ಧ್ವನಿಯಲ್ಲಿ ಹೇಳಿ ಎದ್ದು ಹೊರಟರು. ಅಂದು ಪಾಠ ಮುಂದುವರೆಯಲಿಲ್ಲ.
ಟಿ.ಹೆಚ್.ಇ. - ದಿ; ಟಿ.ಐ.ಜಿ.ಇ.ಆರ್. - ಟೈಗರ್ ರಮೇಶ!
ರಮೇಶ ಎಂಬ ಇನ್ನೊಬ್ಬ ವಿದ್ಯಾರ್ಥಿಯಿದ್ದ. ಆತನನ್ನು ಕೆರೆಗಳ್ಳಿ ಎಂದು ಅವನ ಊರಿನ ಹೆಸರಿನಿಂದಲೇ ಕರೆಯುತ್ತಿದ್ದೆವು. ಆತ ಹಿಂದೆ ಹೆಡ್ಮಾಸ್ಟರಾಗಿದ್ದ ವೆಂಕಟಪ್ಪನವರ ದೂರದ ಸಂಬಂಧಿಯಂತೆ! ರನ್ನಿಂಗ್ ರೇಸ್‌ನಲ್ಲಿ ಪ್ರವೀಣನಾಗಿದ್ದ ಆತನಿಗೆ ಎ.ಬಿ.ಸಿ.ಡಿ. ನೋಡಿಕೊಂಡು ಓದಲು ಬರೆಯಲು ಮಾತ್ರ ಬರುತ್ತಿತ್ತು. ಪುಸ್ತಕ ಮುಚ್ಚಿ ಬರೆಯಲಾಗಲೀ, ಪದಗಳ ಸ್ಪೆಲ್ಲಿಂಗ್ ಹೇಳಲಾಗಲೀ ಆತನಿಗೆ ಕೊನೆಯವರೆಗೂ ಬರಲೇಯಿಲ್ಲ. ‘ಹನ್ನೆರಡು ಅಟೆಂಪ್ಟ್ ಆದರೂ ಪಾಸಾಗದಿದ್ದರೆ, ಅವರೇ ಎಲ್ಲರನ್ನು ಗಾಂಧಿ ಪಾಸ್ ಮಾಡುತ್ತಾರೆ’ ಎಂದು ಆತ ಬಲವಾಗಿ ನಂಬಿದ್ದ!
ಒಂದು ದಿನ ಗಣಿತ ಮೇಷ್ಟ್ರಾದ ಜಿ.ಎಸ್.ಎಸ್. ಇಂಗ್ಲೀಷ್ ಕ್ಲಾಸ್ ತೆಗೆದುಕೊಂಡು ಇಂಗ್ಲೀಷ್ ಬಗ್ಗೆ ಪಾಠ ಮಾಡುತ್ತಿದ್ದರು. ಆ ದಿನ ಹಿಂದಿನ ಬೆಂಚಿನಲ್ಲಿ ಕುಳಿತು ಗಲಾಟೆ ಮಾಡುತ್ತಿದ್ದ ಈ ರಮೇಶ ಅವರ ಕಣ್ಣಿಗೆ ಬಿದ್ದ. ಅಪರೂಪಕ್ಕೆ ಇಂಗ್ಲೀಷ್ ಕ್ಲಾಸ್ ತೆಗೆದುಕೊಂಡು ತಮ್ಮ ಇಂಗ್ಲೀಷ್ ಪಾಂಡಿತ್ಯವನ್ನು ಅದ್ಭುತವಾಗಿ ಪ್ರದರ್ಶನ ಮಾಡುತ್ತಿದ್ದ ಬಿಸಿರಕ್ತದ ಯುವ ಮೇಷ್ಟ್ರು ಜಿ.ಎಸ್.ಎಸ್. ಅವರಿಗೆ ಹೇಗಾಗಿರಬೇಡ! ಗಣಿತದ ಕ್ಲಾಸ್‌ನಲ್ಲಿ ರಮೇಶ ದಡ್ಡನೆಂದು ಅವರಿಗೆ ತಿಳಿದಿದ್ದರಿಂದ ಅವನನ್ನು ಎದ್ದು ನಿಲ್ಲಿಸಿ ಪಾಠ ಓದುವಂತೆ ಹೇಳಿದರು. ಪುಸ್ತಕ ಹಿಡಿದು ನಿಂತ ರಮೇಶ ಟಿ.ಹೆಚ್.ಇ. - ದಿ, ಟಿ.ಐ.ಜಿ.ಇ.ಆರ್. - ಟೈಗರ್ ಎಂದು ಅಕ್ಷರಗಳನ್ನು ಹೇಳುತ್ತಾ ನಂತರ ಕೂಡಿಸಿ ಪದವನ್ನು ಹೇಳುತ್ತಾ ಓದತೊಡಗಿದ. ಅವನನ್ನು ಕೀಟಲೆ ಮಾಡಬೇಕೆಂದೋ ಏನೋ ಜಿ.ಎಸ್.ಎಸ್. ‘ಹಿ ಎಂಬುದಕ್ಕೆ ಸ್ಪೆಲ್ಲಿಂಗ್ ಹೇಳು’ ಎಂದರು, ಆತ ಹೇಳಲಿಲ್ಲ. ಅವರು ಅದನ್ನು ಬೋರ್ಡ್ ಮೇಲೆ ಬರೆದು ‘ಇದು ಏನು?’ ಎಂದರು. ಆತ ನಿಧಾನವಾಗಿ ‘ಹೆಚ್.ಇ. - ಹಿ’ ಎಂದು ಹೇಳಿದ. ಅದನ್ನು ಡಸ್ಟರ್‌ನಿಂದ ಒರೆಸಿದ ಜಿಎಸ್.ಎಸ್. ಮತ್ತೆ ‘ಹಿ’ ಎಂಬುದಕ್ಕೆ ಸ್ಪೆಲ್ಲಿಂಗ್ ಹೇಳು’ ಎಂದರು. ಪುಣ್ಯಾತ್ಮ ರಮೇಶ ಬಾಯಿ ಬಿಡಲೇ ಇಲ್ಲ. ಮೇಷ್ಟ್ರೇ ಮೊದಲು ನಗಲು ಪ್ರಾರಂಭಿಸಿದ್ದರಿಂದ ತರಗತಿಯ ಎಲ್ಲರೂ ಗೊಳ್ ಎಂದು ನಗಲಾರಂಭಿಸಿದರು. ಅವರು ಮತ್ತೆ ‘ಷಿ’ ಎಂಬ ಪದವನ್ನೂ ಅದೇ ರೀತಿ ಬರೆದು ಅಳಿಸಿ ಆತನನ್ನು ಗೋಳು ಹುಯ್ದುಕೊಂಡರು. ಇಡೀ ತರಗತಿಯೇ ನಕ್ಕು ನಕ್ಕು ಸುಸ್ತಾಯಿತು.
ಈ ಎರಡು ಘಟನೆಗಳನ್ನು ಇಲ್ಲಿ ನಾನು ಪ್ರಸ್ತಾಪಿಸಲು ಕಾರಣ ಇಷ್ಟೆ. ಇಂಗ್ಲೀಷ್ ಎಂಬುದು ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಭೂತವಾಗಿಯೇ ಕಾಡುತ್ತಿದೆ. ಅದು ನಮ್ಮದಾಗಲು ಸಾಧ್ಯವೇ ಆಗಿಲ್ಲ. ವ್ಯವಸ್ಥೆಯೂ ಅದಕ್ಕೆ ಪೂರಕವಾಗಿಲ್ಲ. ಇಂದೂ ತಕ್ಕಮಟ್ಟಿಗಾದರೂ ಒಳ್ಳೆಯ ಇಂಗ್ಲೀಷ್‌ನ್ನು ಕಲಿಸುವ ಮೇಷ್ಟ್ರುಗಳೂ ಹೆಚ್ಚಿಲ್ಲ. ಬಿ.ಎಸ್ಸಿ. ಪದವಿಯ ನಂತರ ಎರಡು ಸ್ನಾತಕೋತ್ತರ ಪದವಿ, ಒಂದು ಪಿಹೆಚ್.ಡಿ ಮಾಡಿರುವ ನನಗೂ ಇಂಗ್ಲೀಷ್ ಇನ್ನೂ ಕಬ್ಬಿಣದ ಕಡಲೆಯೇ ಆಗಿದೆ! ಆ ವಿಷಯವಾಗಿ ಆಗಾಗ ಕೀಳರಿಮೆಯೂ ಕಾಡುತ್ತದೆ!
ಅಂದಿನಂತೆ ಇಂದಿಗೂ ಇಂಗ್ಲೀಷ್ ಬೇಕೆ ಬೇಡವೇ ಎಂಬುದರ ಬಗ್ಗೆಯೇ ವೃಥಾ ವಾದವಿವಾದಗಳು ನಡೆಯುತ್ತಿರುವುದು ಮಾತ್ರ ದುರದೃಷ್ಟಕರ. ಇಂಗ್ಲೀಷ್ ಬೇಡವೇ ಬೇಡ ಎನ್ನುವವರು ಮೊದಲು ಯೋಚಿಸಬೇಕಾದ್ದು ಇಂಗ್ಲೀಷ್ ಇಂದಿನ ಮತ್ತು ಮುಂದಿನ ಸಂದರ್ಭಗಳಲ್ಲಿ ಅಗತ್ಯವಾಗಿ ಬೇಕಾದ ಭಾಷೆಯಾಗಿದೆಯೆ ಇಲ್ಲವೆ ಎಂಬ ಸಂಗತಿ. ಆಗಿಲ್ಲ ಎಂದು ಮೊಂಡುವಾದ ಹೂಡುವವರಿಗೆ ನಾವೇನು ಮಾಡಲಾಗುವುದಿಲ್ಲ. ಜಾಗತೀಕರಣದ ಒಳ್ಳೆಯ ಫಲವನ್ನು ನಾವು ಅನುಭವಿಸಲು ಸಿದ್ಧರಾಗಿರುವಂತೆ ಅದರಿಂದ ಬರುವ ಕೆಟ್ಟದ್ದನ್ನು ಅನುಭವಿಸಲೂ ನಾವು ಸಿದ್ಧರಿರಬೇಕಾಗುತ್ತದೆ. ಬರುವ ಒಳ್ಳೆಯ ಫಸಲನ್ನು ತಿನ್ನಲು ಕೇವಲ ಒಂದು ವರ್ಗಕ್ಕೆ ಸಾಧ್ಯವಾದರೆ, ಅದರ ಕೆಟ್ಟ ಫಸಲು ಇನ್ನೊಂದು ವರ್ಗಕ್ಕೆ ಮೀಸಲಾಗಬೇಕಾಗುತ್ತದೆ. ಇದಾಗಬಾರದು. ಆದ್ದರಿಂದಲೇ ‘ಒಂದು ಭಾಷೆಯಾಗಿ ಇಂಗ್ಲೀಷ್ ಅಗತ್ಯವಾಗಿ ಬೇಕು’ ಎಂದರೆ ತಪ್ಪು ಎನ್ನಲಾಗುವುದಿಲ್ಲ ಅಲ್ಲವೆ?
Wednesday, May 20, 2009
ಅಜ್ಜ ಹೇಳಿದ್ದ ‘ಕೋತಿಯ ಕಥೆ’ - (5)
ಒಂದು ಊರಲ್ಲಿ ಒಂದು ಕೋತಿ ಇತ್ತು. ಒಂದು ದಿವಸ ಅದರ ಬಾಲ ಮುಳ್ಳಿಗೆ ಸಿಕ್ಕೊಂಡಿತ್ತು. ಆಗ ಆ ದಾರಿಲಿ ಒಬ್ಬ ಕುಡ್ಲು ಹಿಡ್ಕೊಂಡು ಬರ್‍ತಿದ್ದ. ಕೋತಿ ‘ಅಣ್ಣ ಅಣ್ಣ, ನನ್ನ ಬಾಲ ವಸಿ ಬಿಡಿಸ್ತೀಯಾ’ ಅಂತು. ಅವನು ಅದರ ಬಾಲ ಬಿಡಸುವಾಗ ಅಡ್ಡ ಬರ್‍ತಿದ್ದ ಮುಳ್ಳುಗಳನ್ನು ಕತ್ತರಿಸುವಾಗ, ಕೋತಿ ಬಾಲವೂ ತುಂಡಾಗಿ ಹೋಯ್ತು! ಆಗ ಕೋತಿ ‘ಏನಣ್ಣ, ಬಾಲ ಬಿಡ್ಸು ಅಂದ್ರೆ, ಅದನ್ನೇ ಕತ್ರಿಸಿಬಿಟ್ಟೆ. ಈಗ ನನ್ನ ಬಾಲ ಸರಿಮಾಡ್ಕೊಡು. ಇಲ್ಲಾಂದ್ರೆ ನಿನ್ನ ಕುಡ್ಲು ಕೊಡು’ ಅಂದ್ಬುಡ್ತು. ಅವನು ಕುಡ್ಲು ಕೊಟ್ಟ .
ಇತ್ತ ಕೋತಿ ಕುಡ್ಲು ಹಿಡ್ಕೊಂಡು ಬರ್‍ತಿರಬೇಕಾದ್ರೆ ಒಬ್ಬ ತೆಂಗಿನ್ಕಾಯಿನ ಹಲ್ಲಲ್ಲಿ ಸುಲೀತಿದ್ದ. ಆಗ ಕೋತಿ ‘ಅಣ್ಣ ಹಲ್ಲಲ್ಲಿ ಏಕ್ ಸುಲಿತೀಯಾ? ತಗೋ ಕುಡ್ಲು’ ಅಂತ ಕೊಡ್ತು. ಅವನು ಕುಡ್ಲು ತಗೊಂಡು ಕಾಯಿ ಸುಲಿದು, ಅದನ್ನು ಹೊಡಿಬೇಕಾದ್ರೆ ಕುಡ್ಲು ಮುರ್‍ದೋಯ್ತು! ಆಗ ಕೋತಿ ‘ಅಯ್ಯೋಯ್ಯೋ ನನ್ನ ಕುಡ್ಲು ಮುರ್‍ದೋಯ್ತು. ಈಗ ನನ್ನ ಕುಡ್ಲು ಸರಿ ಮಾಡ್ಕೊಡು. ಇಲ್ಲಾಂದ್ರೆ ನಿನ್ನ ತೆಂಗಿನ್ಕಾಯಿನೆ ಕೊಡು’ ಅಂತು. ಅವನು ಕಾಯಿ ಕೊಟ್ಟ.
ಕೋತಿ ಕಾಯಿ ಹಿಡ್ಕೊಂಡು ಬರ್‍ತಿರಬೇಕಾದ್ರೆ, ಅಲ್ಲೊಬ್ಬ ಒಂದು ಕೋಣನ್ನ ಹೊಡ್ಕೊಂಡು ಬರ್‍ತಿದ್ದ. ಅವನಿಗೆ ತುಂಬಾ ಹೊಟ್ಟೆ ಹಸ್ತಿತ್ತು. ಅದನ್ನು ನೋಡಿ ಕೋತಿ ‘ಅಣ್ಣ ಅದ್ಯಾಕೆ ಹಸ್ಕೊಂಡಿದ್ದಿ? ತಗೋ ಕಾಯಿ ತಿನ್ನು’ ಅಂತ ಕೊಡ್ತು. ಅವನು ಕಾಯಿ ತಿಂದು ಹೊಟ್ಟೆ ತುಂಬಿಸ್ಕೊಂಡ. ಆಗ ಕೋತಿ ‘ನನ್ನಕಾಯಿ ನನಗೆ ಕೊಟ್ಟುಬಿಡು. ಇಲ್ಲಾಂದ್ರೆ ನಿನ್ನ ಕೋಣನ್ನ ಕೊಡು’ ಅಂತು. ಅವನಿಗೆ ಬೇಜಾರಾಗಿ, ಕೋಣನ್ನೆ ಕೊಟ್ಟ.
ಕೋತಿ ಕೋಣನ ಮೇಲೆ ಕುತ್ಕೊಂಡು ಬರ್‍ತಿತ್ತು. ಅಲ್ಲೊಬ್ಬ ಗಾಣಿಗ, ಗಾಣಕ್ಕೆ ತನ್ನ ಹೆಂಡತೀನ ಕಟ್ಟಿ ಗಾಣ ಹೊಡಿತಿದ್ದ. ಆಗ ಕೋತಿ ‘ಏನಣ್ಣ? ಗಾಣಕ್ಕೆ ಯಾರ್‍ಯಾರ ಹೆಂಡ್ತೀನ ಕಟ್ಟಿ ಹೊಡಿತಾರ? ತಗೋ ಕೋಣನ್ನ. ಹೂಡು ಗಾಣಕ್ಕೆ’ ಅಂತು. ಅವನು ಖುಷಿಯಿಂದ ಗಾಣಕ್ಕೆ ಕೋಣನ್ನ ಹೂಡಿ ಹೊಡೆದ. ಅದು ಸುತ್ತುಬೇಕಾದ್ರೆ ಅದ್ರ ಕಾಲು ಮುರ್‍ದೋಯ್ತು! ಆಗ ಕೋತಿ ‘ನನ್ನ ಕೋಣದ ಕಾಲು ಸರಿಮಾಡ್ಕೊಡು. ಇಲ್ಲಾಂದ್ರೆ ನನಗೆ ಎಣ್ಣೆ ಕೊಡು’ ಅಂತು. ಅವನು ಎಣ್ಣೆ ಕೊಟ್ಟ
.
ಕೋತಿ ಎಣ್ಣೆ ಇಡ್ಕೊಂಡು ಬರ್‍ತಿರಬೇಕಾದ್ರೆ ಅಲ್ಲೊಬ್ಬ ದೋಸೆ ಮಾಡ್ತಾಯಿದ್ದ. ಅದಕ್ಕೆ ಹಾಕಕ್ಕೆ ಅವನತ್ರ ಎಣ್ಣೆ ಇರ್‍ಲಿಲ್ಲ. ಆಗ ಕೋತಿ ‘ತಗೊಳ್ಳಣ್ಣ ಎಣ್ಣೆ ಹಾಕಿ ದೋಸೆ ಮಾಡು’ ಅಂತ ಕೊಡ್ತು. ಅವನು ದೋಸೆ ಮಾಡ್ದ. ಎಣ್ಣೆ ಎಲ್ಲ ಮುಗ್ದೋಯ್ತು! ಆಗ ಕೋತಿ, ‘ನನ್ನ ಎಣ್ಣೆ ವಾಪಸ್ ಕೊಡು. ಇಲ್ಲಾ ನನಗೆ ದೋಸೆ ಕೊಡು’ ಅಂತು. ಅವನು ಎಲ್ಲಾ ದೋಸೆ ಕೋತಿಗೆ ಕೊಟ್ಟ.
ಕೋತಿ ಒಂದಷ್ಟು ದೋಸೆ ತಿಂದು, ಉಳ್ದಿದ್ದ ದೋಸೆ ಹಿಡ್ಕೊಂಡು ಬರ್‍ತಾಯಿತ್ತು. ಅಲ್ಲೊಬ್ಬ ಡೋಲು ಹೊತ್ಕೊಂಡು ಹೋಗ್ತಾಯಿದ್ದ. ಅವನಿಗೆ ತುಂಬಾ ಹೊಟ್ಟೆ ಹಸ್ದಿತ್ತು. ಅದನ್ನ ನೋಡಿ ಕೋತಿ ಅವನಿಗೆ ದೋಸೆ ತಿನ್ನೋಕೆ ಕೊಡ್ತು. ಅವನು ದೋಸೆ ತಿಂದ. ಆಗ ಕೋತಿ, ‘ನನ್ನ ದೋಸೆ ನನಗೆ ಕೊಡು. ಇಲ್ಲಾ ನಿನ್ನ ಡೋಲು ಕೋಡು’ ಅಂತು. ಅವನು ಡೋಲು ಕೊಟ್ಟ.
ಆಗ ಕೋತಿ ಡೋಲು ನೇತಾಕ್ಕೊಂಡು ಬಡಿಯೋದಿಕ್ಕೆ ಶುರುಮಾಡ್ತು.
ಬಾಲ ಹೋಗಿ ಕುಡ್ಲು ಬಂತು ಡುಂ... ಡುಂ...
ಕುಡ್ಲು ಹೋಗಿ ಕಾಯಿ ಬಂತು ಡುಂ... ಡುಂ...
ಕಾಯಿ ಹೋಗಿ ಕೋಣ ಬಂತು ಡುಂ... ಡುಂ...
ಕೋಣ ಹೋಗಿ ಎಣ್ಣೆ ಬಂತು ಡುಂ... ಡುಂ...
ಎಣ್ಣೆ ಹೋಗಿ ದೋಸೆ ಬಂತು ಡುಂ... ಡುಂ...
ದೋಸೆ ಹೋಗಿ ಡೋಲು ಬಂತು ಡುಂ... ಡುಂ... ಡುಂ... ಡುಂ...
{ಈ ಕಥೆಯ ಹಲವಾರು ಪ್ರಬೇಧಗಳನ್ನು ನಾನು ಕೇಳಿದ್ದೇನೆ. ಬಹುಶಃ ಹೇಳಲು ಸುಲಭವಾಗಿರುವುದು ಮತ್ತು ಬಾಲ ಹಾಗೂ ಡೋಲು ಇವುಗಳ ಮಧ್ಯೆ ಎಷ್ಟು ಬೇಕಾದರೂ ಸೇರಿಸುವ ಅವಕಾಶ ಇರುವುದು ಈ ವೈವಿಧ್ಯತೆಗೆ ಕಾರಣ ಎನ್ನಿಸುತ್ತದೆ. ಕೋಣಕ್ಕೆ ಬದಲಾಗಿ ಎಣ್ಣೆ ಕೇಳುವ ಕೋತಿ ಇಲ್ಲಿದೆ. ಆದರೆ ಇನ್ನೊಂದರಲ್ಲಿ ಆ ಗಾಣಿಗನ ಹೆಂಡತಿಯನ್ನೇ ಕೇಳಿ ಪಡೆದುಕೊಳ್ಳುತ್ತದೆ! ಮುಂದೆ ದೋಸೆ ಮಾಡುವವನು ದೋಸೆಗೆ ಹಿಟ್ಟು ರುಬ್ಬೋದನ್ನು ನೋಡಿ, ತಗೋ ಹೆಂಡ್ತಿ ಕೈಯಲ್ಲಿ ರುಬ್ಬುಸ್ಕೊ ಅನ್ನುತ್ತೆ. ಆಗ ಅವಳ ಕೈ ಮುರ್‍ದೋಗಿ, ಅವಳ ಬದಲಿಗೆ ದೋಸೆ ಕೇಳುತ್ತೆ.}
ಚಿತ್ರಕೃಪೆ: ಅಂತರ್ಜಾಲ
ಇತ್ತ ಕೋತಿ ಕುಡ್ಲು ಹಿಡ್ಕೊಂಡು ಬರ್‍ತಿರಬೇಕಾದ್ರೆ ಒಬ್ಬ ತೆಂಗಿನ್ಕಾಯಿನ ಹಲ್ಲಲ್ಲಿ ಸುಲೀತಿದ್ದ. ಆಗ ಕೋತಿ ‘ಅಣ್ಣ ಹಲ್ಲಲ್ಲಿ ಏಕ್ ಸುಲಿತೀಯಾ? ತಗೋ ಕುಡ್ಲು’ ಅಂತ ಕೊಡ್ತು. ಅವನು ಕುಡ್ಲು ತಗೊಂಡು ಕಾಯಿ ಸುಲಿದು, ಅದನ್ನು ಹೊಡಿಬೇಕಾದ್ರೆ ಕುಡ್ಲು ಮುರ್‍ದೋಯ್ತು! ಆಗ ಕೋತಿ ‘ಅಯ್ಯೋಯ್ಯೋ ನನ್ನ ಕುಡ್ಲು ಮುರ್‍ದೋಯ್ತು. ಈಗ ನನ್ನ ಕುಡ್ಲು ಸರಿ ಮಾಡ್ಕೊಡು. ಇಲ್ಲಾಂದ್ರೆ ನಿನ್ನ ತೆಂಗಿನ್ಕಾಯಿನೆ ಕೊಡು’ ಅಂತು. ಅವನು ಕಾಯಿ ಕೊಟ್ಟ.
ಕೋತಿ ಕಾಯಿ ಹಿಡ್ಕೊಂಡು ಬರ್‍ತಿರಬೇಕಾದ್ರೆ, ಅಲ್ಲೊಬ್ಬ ಒಂದು ಕೋಣನ್ನ ಹೊಡ್ಕೊಂಡು ಬರ್‍ತಿದ್ದ. ಅವನಿಗೆ ತುಂಬಾ ಹೊಟ್ಟೆ ಹಸ್ತಿತ್ತು. ಅದನ್ನು ನೋಡಿ ಕೋತಿ ‘ಅಣ್ಣ ಅದ್ಯಾಕೆ ಹಸ್ಕೊಂಡಿದ್ದಿ? ತಗೋ ಕಾಯಿ ತಿನ್ನು’ ಅಂತ ಕೊಡ್ತು. ಅವನು ಕಾಯಿ ತಿಂದು ಹೊಟ್ಟೆ ತುಂಬಿಸ್ಕೊಂಡ. ಆಗ ಕೋತಿ ‘ನನ್ನಕಾಯಿ ನನಗೆ ಕೊಟ್ಟುಬಿಡು. ಇಲ್ಲಾಂದ್ರೆ ನಿನ್ನ ಕೋಣನ್ನ ಕೊಡು’ ಅಂತು. ಅವನಿಗೆ ಬೇಜಾರಾಗಿ, ಕೋಣನ್ನೆ ಕೊಟ್ಟ.

ಕೋತಿ ಕೋಣನ ಮೇಲೆ ಕುತ್ಕೊಂಡು ಬರ್‍ತಿತ್ತು. ಅಲ್ಲೊಬ್ಬ ಗಾಣಿಗ, ಗಾಣಕ್ಕೆ ತನ್ನ ಹೆಂಡತೀನ ಕಟ್ಟಿ ಗಾಣ ಹೊಡಿತಿದ್ದ. ಆಗ ಕೋತಿ ‘ಏನಣ್ಣ? ಗಾಣಕ್ಕೆ ಯಾರ್‍ಯಾರ ಹೆಂಡ್ತೀನ ಕಟ್ಟಿ ಹೊಡಿತಾರ? ತಗೋ ಕೋಣನ್ನ. ಹೂಡು ಗಾಣಕ್ಕೆ’ ಅಂತು. ಅವನು ಖುಷಿಯಿಂದ ಗಾಣಕ್ಕೆ ಕೋಣನ್ನ ಹೂಡಿ ಹೊಡೆದ. ಅದು ಸುತ್ತುಬೇಕಾದ್ರೆ ಅದ್ರ ಕಾಲು ಮುರ್‍ದೋಯ್ತು! ಆಗ ಕೋತಿ ‘ನನ್ನ ಕೋಣದ ಕಾಲು ಸರಿಮಾಡ್ಕೊಡು. ಇಲ್ಲಾಂದ್ರೆ ನನಗೆ ಎಣ್ಣೆ ಕೊಡು’ ಅಂತು. ಅವನು ಎಣ್ಣೆ ಕೊಟ್ಟ
.ಕೋತಿ ಎಣ್ಣೆ ಇಡ್ಕೊಂಡು ಬರ್‍ತಿರಬೇಕಾದ್ರೆ ಅಲ್ಲೊಬ್ಬ ದೋಸೆ ಮಾಡ್ತಾಯಿದ್ದ. ಅದಕ್ಕೆ ಹಾಕಕ್ಕೆ ಅವನತ್ರ ಎಣ್ಣೆ ಇರ್‍ಲಿಲ್ಲ. ಆಗ ಕೋತಿ ‘ತಗೊಳ್ಳಣ್ಣ ಎಣ್ಣೆ ಹಾಕಿ ದೋಸೆ ಮಾಡು’ ಅಂತ ಕೊಡ್ತು. ಅವನು ದೋಸೆ ಮಾಡ್ದ. ಎಣ್ಣೆ ಎಲ್ಲ ಮುಗ್ದೋಯ್ತು! ಆಗ ಕೋತಿ, ‘ನನ್ನ ಎಣ್ಣೆ ವಾಪಸ್ ಕೊಡು. ಇಲ್ಲಾ ನನಗೆ ದೋಸೆ ಕೊಡು’ ಅಂತು. ಅವನು ಎಲ್ಲಾ ದೋಸೆ ಕೋತಿಗೆ ಕೊಟ್ಟ.

ಕೋತಿ ಒಂದಷ್ಟು ದೋಸೆ ತಿಂದು, ಉಳ್ದಿದ್ದ ದೋಸೆ ಹಿಡ್ಕೊಂಡು ಬರ್‍ತಾಯಿತ್ತು. ಅಲ್ಲೊಬ್ಬ ಡೋಲು ಹೊತ್ಕೊಂಡು ಹೋಗ್ತಾಯಿದ್ದ. ಅವನಿಗೆ ತುಂಬಾ ಹೊಟ್ಟೆ ಹಸ್ದಿತ್ತು. ಅದನ್ನ ನೋಡಿ ಕೋತಿ ಅವನಿಗೆ ದೋಸೆ ತಿನ್ನೋಕೆ ಕೊಡ್ತು. ಅವನು ದೋಸೆ ತಿಂದ. ಆಗ ಕೋತಿ, ‘ನನ್ನ ದೋಸೆ ನನಗೆ ಕೊಡು. ಇಲ್ಲಾ ನಿನ್ನ ಡೋಲು ಕೋಡು’ ಅಂತು. ಅವನು ಡೋಲು ಕೊಟ್ಟ.
ಆಗ ಕೋತಿ ಡೋಲು ನೇತಾಕ್ಕೊಂಡು ಬಡಿಯೋದಿಕ್ಕೆ ಶುರುಮಾಡ್ತು.
ಬಾಲ ಹೋಗಿ ಕುಡ್ಲು ಬಂತು ಡುಂ... ಡುಂ...ಕುಡ್ಲು ಹೋಗಿ ಕಾಯಿ ಬಂತು ಡುಂ... ಡುಂ...
ಕಾಯಿ ಹೋಗಿ ಕೋಣ ಬಂತು ಡುಂ... ಡುಂ...
ಕೋಣ ಹೋಗಿ ಎಣ್ಣೆ ಬಂತು ಡುಂ... ಡುಂ...
ಎಣ್ಣೆ ಹೋಗಿ ದೋಸೆ ಬಂತು ಡುಂ... ಡುಂ...
ದೋಸೆ ಹೋಗಿ ಡೋಲು ಬಂತು ಡುಂ... ಡುಂ... ಡುಂ... ಡುಂ...
{ಈ ಕಥೆಯ ಹಲವಾರು ಪ್ರಬೇಧಗಳನ್ನು ನಾನು ಕೇಳಿದ್ದೇನೆ. ಬಹುಶಃ ಹೇಳಲು ಸುಲಭವಾಗಿರುವುದು ಮತ್ತು ಬಾಲ ಹಾಗೂ ಡೋಲು ಇವುಗಳ ಮಧ್ಯೆ ಎಷ್ಟು ಬೇಕಾದರೂ ಸೇರಿಸುವ ಅವಕಾಶ ಇರುವುದು ಈ ವೈವಿಧ್ಯತೆಗೆ ಕಾರಣ ಎನ್ನಿಸುತ್ತದೆ. ಕೋಣಕ್ಕೆ ಬದಲಾಗಿ ಎಣ್ಣೆ ಕೇಳುವ ಕೋತಿ ಇಲ್ಲಿದೆ. ಆದರೆ ಇನ್ನೊಂದರಲ್ಲಿ ಆ ಗಾಣಿಗನ ಹೆಂಡತಿಯನ್ನೇ ಕೇಳಿ ಪಡೆದುಕೊಳ್ಳುತ್ತದೆ! ಮುಂದೆ ದೋಸೆ ಮಾಡುವವನು ದೋಸೆಗೆ ಹಿಟ್ಟು ರುಬ್ಬೋದನ್ನು ನೋಡಿ, ತಗೋ ಹೆಂಡ್ತಿ ಕೈಯಲ್ಲಿ ರುಬ್ಬುಸ್ಕೊ ಅನ್ನುತ್ತೆ. ಆಗ ಅವಳ ಕೈ ಮುರ್‍ದೋಗಿ, ಅವಳ ಬದಲಿಗೆ ದೋಸೆ ಕೇಳುತ್ತೆ.}
ಚಿತ್ರಕೃಪೆ: ಅಂತರ್ಜಾಲ
Subscribe to:
Posts (Atom)