ಕುವೆಂಪು ಅವರ ಮಹಾಕಾವ್ಯ "ಶ್ರೀರಾಮಾಯಣದರ್ಶನಂ" ಮಹಾಕಾವ್ಯದ ಗಮಕ ವಾಚನ-ವ್ಯಾಖ್ಯಾನದ ಡಿ.ವಿ.ಡಿ. ಕೇಳುಗರಿಗೆ ಲಭ್ಯವಾಗುತ್ತಿವೆ. 35ಕ್ಕೂ ಹೆಚ್ಚು ಜನ ಗಮಕಿಗಳು, 25ಕ್ಕೂ ಜನ ವ್ಯಾಖ್ಯಾನಕಾರರು ಈ ಧ್ವನಿಮುದ್ರಿಕೆಗಳನ್ನು ತಯಾರಿಕೆಯಲ್ಲಿ ಭಾಗವಹಿಸಿದ್ದಾರೆ. ಸುಶ‍್ರಾವ್ಯವಾಗಿ ಮೂಡಿಬಂದಿರುವ ಗಮಕ ವಾಚನದ ಮೂಲಕ ಮಹಾಕಾವ್ಯವನ್ನು ಕೇಳುಗರು, ಓದುಗರು ತಮ್ಮದಾಗಿಸಿಕೊಳ್ಳುವ ಅವಕಾಶ ಲಭ್ಯವಾಗಿದೆ.
ಮಹಾಕಾವ್ಯವನ್ನು ಈಗಾಗಲೇ ಓದಿರುವವರು, ಓದಲು ಸಮಯಾಭಾವವಿರುವವರಿಗೆ ಎಲ್ಲರಿಗೂ ಈ ಧ್ವನಿಮುದ್ರಿಕೆಗಳು ಉಪಯೋಗವಾಗಲಿವೆ. ಪ್ರಯಾಣ ಮಾಡುವಾಗ, ಬಿಡುವಾದಾಗ ಅಥವಾ ಕೆಲಸ ಮಾಡುತ್ತಲೇ ಕಾವ್ಯವನ್ನು ಕೇಳುವ ಅವಕಾಶ ಕಾವ್ಯಾಸಕ್ತರಿಗೆ ಸಿಕ್ಕಿದೆ.
ನಾಲ್ಕು ಡಿ.ವಿ.ಡಿ.ಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಗಂಟೆಗಳ ಅವಧಿಯಲ್ಲಿ ಕಾವ್ಯವನ್ನು ಅಡಕಗೊಳಿಸಲಾಗಿದೆ.
ಅದರ ಒಂದು ಸ್ಯಾಂಪಲ್ ಅನ್ನು ಇಲ್ಲಿ ಕೇಳಿ :https://sites.google.com/site/nandondmatu/mp3/1.1.2.MP3
Record and upload audio >>
Record audio or upload mp3 >>
Record and upload voice >>
Voice Recorder >>
No comments:
Post a Comment