Tuesday, November 10, 2009

ಓ ನನ್ನ ಚೇತನಾ! ಕುವೆಂಪು

ಕುವೆಂಪು ಅವರು ನಿಧನರಾಗಿ ಇಂದಿಗೆ ಹದಿನೈದು ವರ್ಷಗಳು ಕಳೆದುಹೋಗುತ್ತವೆ. ಆ ಕುವೆಂಪುವನ್ನೇ ಸೃಜಿಸಿದ ಬೃಹತ್ತು ಹಾಗೂ ಮಹತ್ತಾದ ಸಾಹಿತ್ಯ ರಾಶಿಯಿಂದಾಗಿ ಇಂದಿಗೂ, ಎಂದಿಗೂ ಕುವೆಂಪು ಜನಮಾನಸದಿಂದ ದೂರವಾಗುವುದಿಲ್ಲ. ಅವರ ಸಮಗ್ರ ಸಾಹಿತ್ಯದ ಸಾರಭೂತದಂತೆ ರೂಪಗೊಂಡಿದ್ದು ವಿಶ್ವಮಾನವ ಸಂದೇಶ. ತನ್ನ ಎಲ್ಲಾ ಸಾಹಿತ್ಯವನ್ನು ಜನ ಮರೆತರೂ ಚಿಂತೆಯಿಲ್ಲ; ವಿಶ್ವಮಾನವ ಸಂದೇಶವೊಂದನ್ನು ಸ್ವೀಕರಿಸಿದರೆ ಸಾಕು ಎಂಬುದು ಸ್ವತಃ ಕುವೆಂಪು ಅವರ ಅಭಿಪ್ರಾಯವಾಗಿತ್ತು. ಅಂತಹ ವಿಶ್ವಮಾನವ ಸಂದೇಶದ ಭಾಗವಾದ "ವಿಶ್ವಮಾನವಗೀತೆ - ಅನಿಕೇತನ" ಗೀತೆಯನ್ನು ಓದುತ್ತಾ ಕೇಳುತ್ತಾ ಆ ಚೇತನಕ್ಕೆ ನಾವು ನಮ್ಮ ನಮನಗಳನ್ನು ಸಲ್ಲಿಸೋಣ.


ವಿಶ್ವಮಾನಗೀತೆ - ಅನಿಕೇತನ

ಓ ನನ್ನ ಚೇತನ,
ಆಗು ನೀ ಅನಿಕೇತನ!

ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗ೦ತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ಎಲ್ಲಿಯೂ ನಿಲ್ಲದಿರು;
ಮನೆಯನೆ೦ದೂ ಕಟ್ಟದಿರು;
ಕೊನೆಯನೆ೦ದೂ ಮುಟ್ಟದಿರು;
ಓ ಅನ೦ತವಾಗಿರು!
ಓ ನನ್ನ ಚೇತನ,
ಆಗು ನೀ ಅನಿಕೇತನ!

ಅನ೦ತ ತಾನ್ ಅನ೦ತವಾಗಿ
ಆಗುತಿಹನೆ ನಿತ್ಯಯೋಗಿ;
ಅನ೦ತ ನೀ ಅನ೦ತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,
ಆಗು ನೀ ಅನಿಕೇತನ!
(ಆಕರ: ಕುವೆಂಪು ಸಮಗ್ರಕಾವ್ಯ - ಸಂಪುಟ 2, ಪುಟ 894)ಶ್ರೀ ವಿ.ಕೆ.ಗೋಕಾಕ್ ಅವರ ಇಂಗ್ಲಿಷ್ ಅನುವಾದ
The Unhoused Consciousness

Be unhoused, O my soul!
Only the Infinite is your goal.

Leave those myriad forms behind.
Leave the million names that bind.
A flash will pierce your heart and mind.
And unhouse you my soul!

Winnow the chaff of a hundred creeds.
Beyond the systems, hollow as reeds,
Turn unhorizoned where Truth leads,
To be unhoused my soul!

Stop not on the unending way.
Never build a house of clay.
The quest is endless. Night and day,
There can be no end to your play
When you are unhoused, O my soul!

The infinite’s Yoga knows no end.
Endless the quest you apprehend.
You’ll grow infinite and ascend
When you are unhoused, O my soul!
(ಆಕರ: ಕುವೆಂಪು ಸಮಗ್ರಕಾವ್ಯ - ಸಂಪುಟ 2, ಪುಟ 894)

http://www.kuvempu.com/ ತಾಣದಲ್ಲಿರುವ ಇಂಗ್ಲಿಷ್ ಅನುವಾದ

O my spirit…
set roots nowhere… O my spirit


Grow beyond the myriad forms…
Go beyond the countless names…
From a heart overfull, inspiration bursts forth…
O my spirit…
set roots nowhere… O my spirit


Winnow the chaff of a hundred creeds…
Stretch beyond the stifling philosophies…
Rise, immense and endless as the cosmos…
O my spirit…
set roots nowhere… O my spirit


Rest nowhere on the unending road…
Build never a binding nest…
Touch never the boundary…
O remain infinite and boundless…
O my spirit…
set roots nowhere… O my spirit


Infinity's Yoga has no end…
Endless is the quest you apprehend…
You are that infinity…
become that boundless…
Ascend, ascend, ascend, ascend!
O my spirit…
set roots nowhere… O my spirit
(ಕೃಪೆ: http://www.kuvempu.com/ )

"ವಿಶ್ವಮಾನ ಸಂದೇಶ"ದ ಪೂರ್ಣಪಾಠ - ಪಂಚಮಂತ್ರ ಮತ್ತು ಸಪ್ತಸೂತ್ರ - http://www.kuvempu.com/ ವೆಬ್ ತಾಣದಲ್ಲಿ ದೊರೆಯುತ್ತದೆ.

5 comments:

AntharangadaMaathugalu said...

ಸತ್ಯನಾರಾಯಣ ಸಾರ್...
ಕುವೆಂಪು ಅವರ ಓ ನನ್ನ ಚೇತನಾ... ಹಾಡಿನ ಕೊಂಡಿ...
http://www.youtube.com/watch?v=r9Pqy6nz1OE
ಇಲ್ಲಿ ಹೇಗೆ ಹಾಕಬೇಕೋ ಗೊತ್ತಿಲ್ಲ... ನಿಮ್ಮ ಲೇಖನದಲ್ಲೇ ಸೇರಿಸಬಹುದು... ವಿಡಿಯೋ ಕೊಂಡಿ ಕೂಡ ಅದರಲ್ಲೇ ಇದೆ...
ಆಂಗ್ಲ ಅನುವಾದ ಕೂಡ ಹಾಕಿದ್ದೀರಿ... ಧನ್ಯವಾದಗಳು ಸಾರ್...

ಶ್ಯಾಮಲ

Dr. B.R. Satynarayana said...

ಶ್ಯಾಮಲಾ ಅವರಿಗೆ ಧನ್ಯವಾದಗಳು ಮೇಡಂ. ನೀವು ತಿಳಿಸಿದ ಲಿಂಕ್ ಬಳಸಿ ವಿಡಿಯೋ ಅಪ್ ಲೋಡ್ ಮಾಡಿದ್ದೇನೆ. ಈಗ ಹಾಡನ್ನೂ ಕೇಳಬಹುದು. ಕುವೆಂಪು ಅವರ ಅಪರೂಪದ ಚಿತ್ರಗಳನ್ನು ನೋಡಬಹುದು. ಧನ್ಯವಾದಗಳು

ಸಾಗರದಾಚೆಯ ಇಂಚರ said...

ಸತ್ಯನಾರಾಯಣ ಸರ್,
ತುಂಬಾ ಚೆಂದವಾಗಿ ಕುವೆಂಪು ಅವರನ್ನು ನೆನಪಿಸಿಕೊಂಡಿದ್ದಿರಾ,
ಉತ್ತಮ ಬರಹ ಜೊತೆಗೆ ಉಪಯುಕ್ತವಾಗಿದೆ ಬರಹ

PARAANJAPE K.N. said...

ಉತ್ತಮ ಸಕಾಲಿಕ ಬರಹ, ಕುವೆಂಪು ಅವರನ್ನು ಬಹಳ ಚೆನ್ನಾಗಿ ನೆನಪಿಸಿದ್ದೀರಿ

AntharangadaMaathugalu said...

ಸತ್ಯ ಸಾರ್... (ನಿಮ್ಮ ಹೆಸರು ಮೊಟಕು ಮಾಡಿದ್ದಕ್ಕೆ ಕ್ಷಮೆ ಇರಲಿ... ಪ್ರತಿ ಸಾರಿಯೂ ಬರೆಯಲು ಉದ್ದ ಅನ್ನಿಸಿದ್ದರಿಂದ...)ಧನ್ಯವಾದಗಳು ಸಾರ್ ನನ್ನ ಸಲಹೆ ಸ್ವೀಕರಿಸಿದ್ದಕ್ಕೆ....

ಶ್ಯಾಮಲ