Tuesday, November 17, 2009

ನದಿಗಳ ಹೆಸರು ಹುಡುಕಿ; ‘ಜ್ಞಾನಿ ಕನ್ನಡಿಗ’ ಬಿರುದು ಗೆಲ್ಲಿ

ಇತ್ತೀಚಿಗೆ ನನಗೆ ಪರಿಚಿತವಿರುವ ಕನ್ನಡ ಉಪನ್ಯಾಸಕರೊಬ್ಬರು, ‘ಪಿ.ಯು.ಸಿ. ಮಕ್ಕಳಿಗೆ ಕನ್ನಡ-ಕರ್ನಾಟಕ ಕುರಿತಂತೆ ಹಲವಾರು ಸ್ಪರ್ಧೆಗಳನ್ನು ನಡೆಸುತ್ತಿದ್ದೇವೆ. ಯಾವುದಾದರೂ ಹೊಸತರನಾದ ಸ್ಪರ್ಧೆಗಳಿದ್ದರೆ ತಿಳಿಸಿ’ ಎಂದಿದ್ದರು. ನಾನು ಮೂರು ರೀತಿಯ ಸ್ಪರ್ಧೆಗಳನ್ನು ತಿಳಿಸಿದ್ದೆ. ಅದರಲ್ಲಿ ಈ ಪದಬಂಧವೂ ಒಂದು.

ದಶಕಗಳ ಹಿಂದೆ ವಾರ ಪತ್ರಿಕೆಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಈ ರೀತಿಯ ಪದಬಂಧ ಇತ್ತೀಚಿಗೆ ನನ್ನ ಕಣ್ಣಿಗೆ ಬಿದ್ದಿಲ್ಲ. ಈ ಪದಬಂಧವನ್ನು ಬಿಡಿಸುವುದರ ಜೊತೆಗೆ ಕರ್ನಾಟಕದಲ್ಲಿ ಹರಿಯುವ ನದಿಗಳ ಬಗ್ಗೆ ತಿಳಿಸುವುದು ನನ್ನ ಉದ್ದೇಶವಾಗಿತ್ತು. ನಾನು ರೂಪಿಸಿದ ಈ ಪದಬಂಧದಲ್ಲಿ ಕರ್ನಾಟಕದಲ್ಲಿ ಹರಿಯುವ ಇಪ್ಪತ್ತಮೂರು (23) ನದಿಗಳ ಹೆಸರುಗಳು ಅಡಕವಾಗಿವೆ. ಅವುಗಳು ಎಂಟೂ ದಿಕ್ಕಿನಿಂದ ಅಂದರೆ - ಕೆಳಮುಖವಾಗಿ, ಮೇಲ್ಮುಖವಾಗಿ, ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ, ಮೇಲಿನ ಎಡಮೂಲೆಯಿಂದ ಕೆಳಗಿನ ಬಲಮೂಲೆಗೆ, ಮೇಲಿನ ಬಲಮೂಲೆಯಿಂದ ಕೆಳಗಿನ ಎಡಮೂಲಗೆ, ಕೆಳಗಿನ ಎಡಮೂಲೆಯಿಂದ ಮೇಲಿನ ಬಲಮೂಲೆಯ ಕಡೆಗೆ, ಕೆಳಗಿನ ಬಲಮೂಲೆಯಿಂದ ಮೇಲಿನ ಎಡಮೂಲೆಯ ಕಡೆಗೆ -ಬರೆಯಲ್ಪಟ್ಟಿವೆ.

ಸ್ಪರ್ಧೆ ನಡೆದ ಮೇಲೆ ಒಂದು ಉತ್ತರ ಪತ್ರಿಕೆಯನ್ನು ನನ್ನ ಮಿತ್ರರು ತಂದು ಅದರ ಹಿಂಬದಿ ನೋಡುವಂತೆ ಹೇಳಿದರು. ಅದರಲ್ಲಿ ಹೀಗೆ ಬರೆಯಲಾಗಿತ್ತು. ‘ಈ ಸ್ಪರ್ಧೆಯಲ್ಲಿ ನನಗೆ ಉತ್ತರಿಸಲಾಗುತ್ತಲ್ಲ. ಏಕೆಂದರೆ ನನಗೆ ಕಾವೇರಿ ಬಿಟ್ಟರೆ ಬೇರೆ ನದಿಗಳ ಹೆಸರೇ ಗೊತ್ತಿಲ್ಲ. ಇನ್ನು ಅವನ್ನು ಇಲ್ಲಿ ಹುಡಕಲು ಹೇಗೆ ಸಾಧ್ಯ. ಆದರೂ ನನಗೆ ಈ ಸ್ಪರ್ಧೆಯಿಂದ ಉಪಯೋಗವಾಗಿದೆ. ಮನೆಗೆ ಹೋಗಿ ಕರ್ನಾಟಕದಲ್ಲಿ ಹರಿಯುವ ನದಿಗಳು ಯಾವುವು ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ. ಈ ಪದಬಂಧ ಕೊಟ್ಟವರಿಗೆ ಧನ್ಯವಾದಗಳು.’ (ಬರಹದಲ್ಲಿದ್ದ ಕಾಗುಣಿತ ದೋಷಗಳನ್ನು ನಿವಾರಿಸಲಾಗಿದೆ). ನನ್ನ ಶ್ರಮ ಸಾರ್ಥಕವಾಯಿತು ಎಂದಕೊಂಡೆ. ಯಾರೂ ಇಪ್ಪತ್ತಮೂರು ನದಿಗಳ ಹೆಸರುಗಳನ್ನು ಪೂರ್ತಿ ಬರೆದಿರದಿದ್ದರೂ, ಅವುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಯೋಚನೆಯನ್ನು ಅವರಲ್ಲಿ ಹುಟ್ಟು ಹಾಕಿದ್ದು ನನಗೆ ಸಂತೋಷ ತಂದಿತ್ತು.



ಈಗ ಅದೇ ಪದಬಂಧವನ್ನು ಬ್ಲಾಗ್ ಓದುಗ ಮಿತ್ರರ ಎದುರು ಇಡುತ್ತಿದ್ದೇನೆ. ನೀವು ಪ್ರಯತ್ನಪಡಿ. ಅಗತ್ಯಬಿದ್ದಲ್ಲಿ ಪದಬಂಧವನ್ನು ಮುದ್ರಿಸಿ ನದಿಗಳ ಹೆಸರುಗಳನ್ನು ಗುರುತಿಸಿ ನಂತರ ಕಾಮೆಂಟ್ ಬಾಕ್ಸಿನಲ್ಲಿ ನದಿಗಳ ಹೆಸರನ್ನು ಬರೆದರೆ ಸಾಕು. ಹೆಚ್ಚು ನದಿಗಳ ಹೆಸರನ್ನು ಬರೆದ ಬ್ಲಾಗ್ ಓದುಗರಿಗೆ ‘ಜ್ಞಾನಿ ಕನ್ನಡಿಗ’ ಎಂಬ ಬಿರದು ಕೊಡಲಾಗುತ್ತದೆ! ಒಮ್ಮೆ ಪ್ರಯತ್ನಿಸಿ ನೋಡಿ. ಶುಭವಾಗಲಿ.



7 comments:

PARAANJAPE K.N. said...

ನಮಸ್ಕಾರ ಸತ್ಯನಾರಾಯಣರಿಗೆ, ಬೆಳಬೆಳಗ್ಗೆನೆ ಮಿದುಳಿಗೆ ಗ್ರಾಸ ಕೊಟ್ಟಿರಿ, ಒಂದು ಐದಾರು ನಿಮಿಷದಲ್ಲಿ 20 ನದಿ ಹೆಸರುಗಳನ್ನು ಪತ್ತೆ ಮಾಡಿದೆ. ಅಷ್ಟರಲ್ಲಿ ನನ್ನ ಫೋನು ರಿ೦ಗಣಿಸಿ ಕಚೇರಿ ಕರ್ತವ್ಯದೆಡೆ ಹೊರಳಿದೆ. ನನಗೆ ಪಟ್ಟಿಯಲ್ಲಿ ಕಾವೇರಿ ಸಿಗಲೇ ಇಲ್ಲ, ಆದರೂ ಸೇರಿಸಿದೆ. ನನ್ನ ಮಗನಿಗೆ ಒಂದು ಪ್ರತಿ ಮುದ್ರಿಸಿ ಕೊಟ್ಟು ನದಿ ಹೆಸರು ಗುರುತಿಸಲು ಹೇಳುವೆ. ಚೆನ್ನಾಗಿದೆ.
ನದಿ ಹೆಸರುಗಳು:-
ವೃಷಭಾವತಿ, ಕುಮಾರಧಾರ, ತು೦ಗಾ, ಕೃಷ್ಣಾ, ಅಘನಾಶಿನಿ, ವೇದಾವತಿ, ಉತ್ತರ ಪಿನಾಕಿನಿ, ಯಗಚಿ, ಲಕ್ಷ್ಮಣತೀರ್ಥ, ಗೋದಾವರಿ, ಚಿತ್ರಾವತಿ, ನೇತ್ರಾವತಿ, ಶರಾವತಿ, ಭದ್ರಾ, ಕಪಿಲಾ, ಕಣ್ವಾ, ಭೀಮೆ, ಶಿ೦ಷಾ, ದಕ್ಷಿಣ ಪಿನಾಕಿನಿ, ಹೇಮಾವತಿ, ವೇದಾ, ಅರ್ಕಾವತಿ, ಕಾವೇರಿ

ಸಾಗರದಾಚೆಯ ಇಂಚರ said...

ತುಂಬಾ ಸುಂದರ ವಾಗಿದೆ
ಇದೀಗ ಆದಷ್ಟು ನದಿ ಹೆಸರು ಹುಡುಕುತ್ತಿದ್ದೇನೆ

ವಿ.ರಾ.ಹೆ. said...

ನಮಸ್ತೆ, ಸ್ಪರ್ಧೆ ಬಹಳ ಚೆನ್ನಾಗಿದೆ , ನಾನೂ ಪ್ರಯತ್ನ ಪಡ್ತೇನೆ.

ಬಿಸಿಲ ಹನಿ said...

ಸರ್ವಜ್ಞನ ತ್ರಿಪದಿ, ದಿನಕರರ ಚೌಪದಿ, ಚುಟುಕು ಪದ್ಯಗಳಂತೆಯೇ ಹೈಕು ಪ್ರಕಾರವು ಒಂದು ಮತ್ತು ವಿಭಿನ್ನವಾದುದು. ಇದು ಮೂಲತಃ ಜಪಾನಿನ ಕಾವ್ಯದ ಒಂದು ಪ್ರಸಿದ್ಧ ಮಾದರಿ. ಅತ್ಯಂತ ಕಡಿಮೆ ಶಬ್ಧಗಳಲ್ಲಿ ಅರ್ಥಪೂರ್ಣವಾದುದನ್ನು ಹೇಳುತ್ತದೆ. ಈ ಪದ್ಯದಲ್ಲಿ 17 ಸಿಲೆಬಲ್‌ (ಒಂದು ಸಲದ ಉಚ್ಚಾರಣೆಗೆ ಶಕ್ಯವಾಗುವಷ್ಟರ ಪದ ಭಾಗ) ಇರುತ್ತವೆ. ಆದರೆ ಈಗೀಗ ಬರುತ್ತಿರುವ ಹೈಕುಗಳಲ್ಲಿ ಸಿಲೆಬಲ್‌ಗಳ ಬಂಧನವಿಲ್ಲ.
ಹೈಕುವಿನಲ್ಲೂ ಪ್ರತೀಕ, ಪ್ರತಿಮೆಗಳ ಬಳಕೆ ಇರುತ್ತದೆ. ಋತುಗಳು ಜನನ, ಬಾಲ್ಯ, ಮುಪ್ಪು, ಸಾವುಗಳ ಸಂಕೇತವಾಗುತ್ತವೆ. ನೀರು ಭಾವನಾ ತರಂಗ ಸೂಚಿಸಿದರೆ, ಗಾಳಿ ಅದಮ್ಯ ಚೈತನ್ಯವನ್ನು ಧ್ವನಿಸುತ್ತದೆ.
‘ಪೊಯೆಟ್ಸ್‌ ಇಂಟರ್‌ನ್ಯಾಶನಲ್‌’ ಸಂಸ್ಥೆ 1995 ರಲ್ಲಿ ಭಾರತದಾದ್ಯಂತ ‘ಹೈಕು’ ಚಳವಳಿಯನ್ನೇ ಪ್ರಾರಂಭಿಸಿತು. ತನ್ನ ಮಾಸ ಪತ್ರಿಕೆಯಲ್ಲಿ ನಿಯಮಿತವಾಗಿ ಹೈಕು ಪದ್ಯಗಳನ್ನು ಪ್ರಕಟಿಸಿತು. 1997 ರಲ್ಲಿ ‘ಆಲ್‌ ಇಂಡಿಯಾ ಹೈಕು ಕಾನ್ಫರನ್ಸ್‌’ನ್ನು ಬೆಂಗಳೂರಲ್ಲಿ ನಡೆಸಿತು ಮತ್ತು ‘ದಿ ಹೈಕು ಸೊಸೈಟಿ ಆಫ್‌ ಇಂಡಿಯಾ’ ಸ್ಥಾಪಿಸಿತು. ಅಲ್ಲದೆ ಹೈಕು ಕಮ್ಮಟಗಳನ್ನು ಸಹ ಆಯೋಜಿಸಿತು.
ಹೈಕು ಪ್ರಕಾರ ಭಾರತದಲ್ಲಿ ಇತ್ತಿಚೆಗಷ್ಟೆ ಪ್ರಸಿದ್ಧಿ ಪಡೆಯುತ್ತಿದೆ. ಕನ್ನಡದ ಇಂಗ್ಲೀಷ ಕವಿ ಡಾ. ಫಕರುದ್ದೀನರು ಈ ಪ್ರಕಾರವನ್ನು ಇಂಗ್ಲೀಷನಲ್ಲಿ ಬರೆದು ಹೆಚ್ಚು ಜನಪ್ರಿಯಗೊಳಿಸಿದ್ದಾರೆ.
ಕನ್ನಡದಲ್ಲಿ ಅಲ್ಲಲ್ಲಿ ಬಿಡಿಯಾದ ಹೈಕು ಕವನಗಳು ಪ್ರಕಟಗೊಂಡಿವೆ. ಆದರೆ ಪೂರ್ತಿ ಕವನ ಸಂಗ್ರಹಗಳಿಲ್ಲ. ಆದರೆ ಇತ್ತೀಚಿಗೆ ವಿಮಲಾ ಶೇಷಾದ್ರಿ (ಡಾ.ಎಮ್.ಶಿವರಾಂ ಅವರ ಮಗಳು) ಅವರು ತಮ್ಮ ‘ಹೈಕು’ ಎಂಬ ಕವನ ಸಂಗ್ರಹ ಕಳೆದ ಮಾರ್ಚ್‌ ತಿಂಗಳಲ್ಲಿ ಪ್ರಕಟಿಸಿದರು. ಡಾ. ಫಕರುದ್ದೀನವರ ಪ್ರಕಾರ ವಿಮಲಾ ಶೇಷಾದ್ರಿ ಪ್ರಥಮ ಕನ್ನಡ ಹೈಕು ಕವಯಿತ್ರಿ.

ಸೀತಾರಾಮ. ಕೆ. / SITARAM.K said...

ಕಾವೇರಿ, ಕಾಳಿ, ವೇದಾವತಿ, ಚಿತ್ರಾವತಿ, ಅಘನಾಶಿನಿ, ತು೦ಗಾ, ಹೇಮಾವತಿ, ಕುಮಾರಧಾರ, ಕೃಷ್ಣಾ, ಲಕ್ಶ್ಮಣತೀರ್ಥ, ವೃಶಭಾವತಿ, ಅರ್ಕಾವತಿ,ನ್ ನೇತ್ರಾವತಿ, ಭದ್ರಾ, ಶರಾವತಿ, ಕಪಿಲಾ, ಭೀಮಾ, ವರದಾ, ದಕ್ಷಿಣ ಪಿನಾಕಿನಿ, ಉತ್ತರ ಪಿನಾಕಿನಿ ಮತ್ತು ಗೋದಾವರಿ ಹೆಸರುಗಳು ಸಿಕ್ಕಿವೆ.(೨೧) . ಇದರಲ್ಲಿ ಕಪಿಲಾ ಹಾಗೂ ಗೋದಾವರಿ ಕರ್ನಾಟಕದಲ್ಲಿ ಹರಿಯುವದಿಲ್ಲ.

makara said...

೧)ಕಾಳಿ ೨)ಕಾವೇರಿ ೩)ಲಕ್ಷ್ಮಣ ತೀರ್ಥ ೪)ಗೋದಾವರಿ* (?) ೫)ಹೇಮಾವತಿ ೬)ವರದಾ ೭)ತುಂಗಾ ೮)ಭದ್ರಾ ೯)ಭೀಮೆ ೧೦)ಉತ್ತರ ಪಿನಾಕಿನಿ ೧೧)ದಕ್ಷಿಣ ಪಿನಾಕಿನಿ ೧೨)ಅಘನಾಶಿನಿ ೧೩)ಕೃಷ್ಣಾ ೧೪)ವೃಷಭಾವತಿ ೧೫)ಶಿಂಷಾ ೧೬)ಚಿತ್ರಾವತಿ
೧೭)ವೇದಾವತಿ ೧೮)ಅರ್ಕಾವತಿ ೧೯)ಕಣ್ವಾ ೨೦)ಯಗಚಿ ೨೧)ಕುಮಾರಧಾರ ೨೨)ನೇತ್ರಾವತಿ ೨೩)ಶರಾವತಿ ೨೪)ಕಪಿಲಾ

*ಗೋದಾವರಿಯ ಉಪನದಿಯಾದ ಮಾಂಜ್ರಾ ನದಿ ಬೀದರ್ ಜಿಲ್ಲೆಯಲ್ಲಿ ಹರಿಯುತ್ತದೆ. ಇನ್ನು ಕರ್ನಾಟಕದ ಹಲವಾರು ನದಿಗಳು ಹೀಗಿವೆ: ಪಾಲೇರು,ಕಬಿನಿ, ಸ್ಪಟಿಕ ಸರೋವರ, ಮಲಪ್ರಭಾ, ಘಟಪ್ರಭಾ, ದೋಣಿ, ಮಾರ್ಕಂಡೇಯಾ, ಶಾಲ್ಮಲಾ, ಹಗರಿ (ತುಂಗಭದ್ರಾ ನದಿಯ ಉಪನದಿ), ಫಲ್ಗುಣೀ, ಇನ್ನೂ ಎಷ್ಟೋ? ಕಳಸಾ-ಬಂಡೋರಿಯಲ್ಲಿ ಹರಿಯುವ ನದಿಗಳು ಯಾವುವೋ?
ಒಟ್ಟಿನಲ್ಲಿ ಬಹಳ ಒಳ್ಳೆಯ ಕೆಲಸ ಮಾಡಿದ್ದೀರ ಸತ್ಯನಾರಾಯಣ ಸರ್! ಧನ್ಯವಾದಗಳು.

Unknown said...

ಗೋದಾವರಿ,ಕಾವೇರಿ,ಲಕ್ಷ್ಮಣತೀರ್ಥ,ಅರ್ಕಾವತಿ,
ಕೃಷ್ಣಾ,ತುಂಗಾ,ಶರಾವತಿ, ದಕ್ಷಿಣ,ಪಿನಾಕಿನಿ,ಚಿತ್ರಾವತಿ,ವೃಷಭಾವತಿ,ಕುಮಾರಧಾರಾ,ಕಾಳಿ,ವೇದಾವತಿ,ಕಪಿಲಾ,ಉತ್ತರ ಪಿನಾಕಿನಿ ನನಗೆ ಇಷ್ಟು ನದಿಗಳು ದೊರೆಕಿವೆ.Covid-19 Lockdown ಅಂತ TimePassಗೆ ಚೆನ್ನಾಗಿತ್ತು. ತುಂಬಾ ಚೆನ್ನಾಗಿತ್ತು ಧನ್ಯವಾದಗಳು.